Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿ ಯುಡೈಸ್‌ ಕೋಡ್‌ ನಮೂದು ಕಡ್ಡಾಯ

---Advertisement---

ಬೆಂಗಳೂರು.ಆಗಸ್ಟ್.10: ರಾಜ್ಯದ ಶಾಲಾ-ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ಮತ್ತು ಪ್ರಮಾಣಪತ್ರಗಳಲ್ಲಿ ಶಾಲಾ/ಕಾಲೇಜಿನ ‘ಯುಡೈಸ್‌ ಕೋಡ್‌’ (UDISE CODE) ನಮೂದಿಸುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಪ್ರಕಾಶ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, 2026-27ರ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಭೌತಿಕ ಅಂಕಪಟ್ಟಿ ನೀಡುವ ಹಳೆಯ ಪದ್ಧತಿಗೆ ಬದಲಾಗಿ, ಡಿಜಿಟಲ್ ರೂಪದಲ್ಲಿ ವಿದ್ಯಾರ್ಥಿಗಳ ಎಪಿಎಎಆರ್ ಐಡಿ (APAAR ID), ಆಧಾರ್ ಐಡಿ, ಭಾವಚಿತ್ರ ಹಾಗೂ ಶಾಲೆಯ ಯುಡೈಸ್‌ ಕೋಡ್ ಒಳಗೊಂಡಂತೆ ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ (NAD) ಹಾಗೂ ಡಿಜಿಲಾಕರ್ (DigiLocker) ಮುಖಾಂತರವೇ ಅಧಿಕೃತ ಅಂಕಪಟ್ಟಿಗಳನ್ನು ಒದಗಿಸಲಾಗುತ್ತದೆ.

ಈ ನೂತನ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ, ಆರ್ಥಿಕ ನೆರವು, ಸ್ಕಾಲರ್‌ಶಿಪ್ ಹಾಗೂ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಅಥವಾ ರಾಜ್ಯದ ಹೊರಗೆ ಅರ್ಜಿ ಸಲ್ಲಿಸುವಾಗ ಪರಿಶೀಲನಾ ಪ್ರಕ್ರಿಯೆ ಅತ್ಯಂತ ಸರಳವಾಗಲಿದೆ. ಪಿಎಂ ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ವಿದ್ಯಾಸಿರಿ, ಡಿಬಿಟಿ ಯೋಜನೆಗಳು, ಶೈಕ್ಷಣಿಕ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ನೇರವಾಗಿ ಪಡೆದುಕೊಳ್ಳಲು ಮತ್ತು ಶಾಲಾ-ಕಾಲೇಜುಗಳ ನಕಲಿ ಪ್ರಮಾಣಪತ್ರಗಳ ಹಾವಳಿ ತಡೆಯಲು ಈ ಹೊಸ ನಿಯಮ ಪ್ರಮುಖ ಪಾತ್ರ ವಹಿಸಲಿದೆ.

Join WhatsApp

Join Now

Join Telegram

Join Now