Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನನ್ಯಾ ಭಟ್ ಕೇಸ್ SIT ಗೆ ಹಸ್ತಾಂತರ : ಸುಜಾತ ಭಟ್ ರಿಯಾಕ್ಷನ್ ಏನು..?

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಕೇಸ್ ಗೆ ಬ್ಯಾಕ್ ಟು ಬ್ಯಾಕ್ ಟ್ವಿಸ್ಟ್ ಸಿಕ್ತಾ ಇದೆ. ಒಂದಷ್ಟು ಜನ ಅನನ್ಯಾ ಭಟ್ ಎಂಬಾಕೆ ಹುಟ್ಟಿಯೇ ಇಲ್ಲ ಅಂತಿದ್ರೆ, ನನ್ನ ಮಗಳು ಇವಳೇ, ಹುಡುಕಿ ಕೊಡಿ ಅಂತಿದ್ದಾರೆ ಸುಜಾತ ಭಟ್. ಇದೀಗ ಈ ಕೇಸ್ ಅನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಿದೆ. ಈ ಸಂಬಂಧ ಸುಜಾತ ಭಟ್ ಮಾತನಾಡಿ, ತುಂಬಾ ಖುಷಿಯಾಗಿದೆ. ಎಲ್ಲರ ಕೇಸ್ ಎಸ್ಐಟಿಗೆ ಹಸ್ತಾಂತರವಾಗಿ ಸರಿಯಾಹಿ ತನಿಖೆ ನಡೆಸಬೇಕು ಎಂದಿದ್ದಾರೆ.

ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಹಾಗಾಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ತಾರ್ಕಿಕ ಅಂತ್ಯವನ್ನ ನೀಡಬೇಕು. ಅದು ಧರ್ಮಸ್ಥಳ ಗ್ರಾಮದಲ್ಲಿ ಆಗಿರುವುದಲ್ವಾ. ನೂರಾರು ಶವಗಳನ್ನ ಹೂತು ಇಟ್ಟಿದ್ದೀವಿ, ಹದಿಮೂರು ವರ್ಷದ ಮಗುವನ್ನು ಹೂತಿಟ್ಟಿದ್ದೀವಿ ಅಂತ ಹೇಳುವಾಗ ಆ ನೋವು ಆ ಹೆತ್ತ ತಾಯಿಯ ನೋವು ಹೇಗೆ ಅನ್ನಿಸ್ತದೆ ಅನ್ನೋದು ಪ್ರಪಂಚಕ್ಕೆ ಗೊತ್ತಾಗಬೇಕು.

ಎಷ್ಟು ಜನ ಏನೆಲ್ಲಾ, ಹೇಗೆಲ್ಲಾ ಮಾತಾಡ್ತಾ ಇದ್ದಾರೆ. ನಂಗರ ಕಮೆಂಟ್ ಗಳನ್ನ ಹಾಕಿದ್ದಾರೆ. ಒಂದು ಸ್ಟೋರಿಯನ್ನೇ ತೆಗೆಯಬಹುದಾಗಿತ್ತು, ಅಜ್ಜಿಯ ಮ್ಯಾಜಿಕ್.. ಈ ರೀತಿಯ ಕಮೆಂಟ್ ಗಳನ್ನೆಲ್ಲಾ ಹಾಕೋದು ತಪ್ಪು. ಇದೇ ಸ್ಥಿತಿ ಅವರ ಮನೆಯಲ್ಲಿ ಆಗಿದ್ದಿದ್ರೆ ಅವರು ಏನು ಮಾಡ್ತಾ ಇದ್ದರು. ಬ್ಯಾಡ್ ಕಮೆಂಟ್ ಹಾಕುವುದಕ್ಕೆ ಅವರಿಗೆ ಯಾವ ಅಧಿಕಾರವೂ ಇಲ್ಲ. ಕೈಯಲ್ಲಿ ಆಗೋದಾದ್ರೆ ಸಹಾಯ ಮಾಡಿ, ಇಲ್ವಾ ಸುಮ್ಮನೆ ಇರಿ. ಜನ ಸಾವಿರ ಕೇಳ್ತಾರೆ ಎಲ್ಲದಕ್ಕೂ ನಾನು ಉತ್ತರ ಕೊಡೋದಕ್ಕೆ ಆಗಲ್ಲ. ನನಗೆ ನಾನು ಮಾತ್ರ ಬದುಕಬೇಕು ಎಂದು ಉತ್ತರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment