ಬೆಂಗಳೂರು: ಧರ್ಮಸ್ಥಳದಲ್ಲಿ ಈಗಾಗಲೇ ಹೆಣಗಳನ್ನ ಹೂತು ಹಾಕಿದ್ದೀನಿ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ನಡುವೆ ಸೌಜನ್ಯ ಕೇಸ್ ಸಂಬಂಧ ಹೋರಾಟ ಮಾಡುತ್ತಿರುವ ಮಹೇಶ್ ತಿಮರೊಡ್ಡಿ ಇದೀಗ ಸಿಎಂ ಅವರನ್ನೇ ಕೊಲೆಗಾರ ಎಂದಿದ್ದಾರೆ. ಸಿದ್ದರಾಮಯ್ಯ ಅವರು 28 ಕೊಲೆಗಳನ್ನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಹೇಳಿಕೆ ಸದನದಲ್ಲಿಯೇ ಚರ್ಚೆಗೆ ಗ್ರಾಸವಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಈ ಸಂಬಂಧ ಮಾತನಾಡಿದ್ದು, ಸರ್ಕಾರ ಅಷ್ಟೊಂದು ಅಸಹಾಯಕವಾಗಿಲ್ಲ. ಆ ವ್ಯಕ್ತಿಯನ್ನು ದೊಡ್ಡವನು ಮಾಡೋದು ಬೇಡ. ಆ ವ್ಯಕ್ತಿಯ ವಿರುದ್ಧ ಹತ್ತಾರು ಕೇಸ್ ಇದೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಬಿಡಲು ಸಾಧ್ಯವಿಲ್ಲ. ಕಾನೂನು ಚಲಾಯಿಸುತ್ತೇವೆ. ಅವರಿಗೆ ಏನು ಶಿಕ್ಷೆ ಕೊಡಿಸಬೇಕು ಆ ಶಿಕ್ಷೆಯನ್ನು ಕೊಡಿಸುತ್ತೇವೆ ಎಂದಿದ್ದಾರೆ.
ಇದೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಸದನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ 28 ಕೊಲೆಗಳನ್ನು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಇದಕ್ಕೆ ಉತ್ತರ ಕೊಡಬೇಕು. ಸದನ ನಡೆಯುವಾಗ ರಾಜ್ಯದ ಸಿಎಂ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದರೆ ಹೇಗೆ..?
ಗೂಂಡಾ ರಾಜ್ಯ ನಡೆಯುತ್ತಿದ್ಯಾ..? ಯಾರು ಬೇಕಾದರೂ ಏನು ಹೇಳಬಹುದೇ..? ಸಿಎಂ 28 ಕೊಲೆ ಮಾಡಿದ್ದಾರಾ..? ಸಿಎಂ ಕೊಲೆಗಾರರೇ..? ಆ ವ್ಯಕ್ತಿಯ ಮೇಲೆ ಎಸ್ಐಟಿ ರಚನೆ ಮಾಡುತ್ತಾರಾ..? ಹದಿನೈದು ದಿನ ಸೀರಿಯಲ್ ಆಗುತ್ತಾ..? ಸರ್ಕಾರಕ್ಕೆ ಕಿವಿ ಇಲ್ವ ಹಾಗಾದ್ರೆ ಎಂದು ಆರ್ ಅಶೊಕ್ ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











