ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 25 : ಮಾಂತ್ರಿಕ ಶಕ್ತಿಯುಳ್ಳ ಸಂಗೀತ ಮನುಷ್ಯರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ ಎಂದು ಕನ್ನಡ ಅಧ್ಯಯನ ವಿಭಾಗದ ಎಚ್.ವಿಶ್ವನಾಥ್ ತಿಳಿಸಿದರು.
ಗಂಧರ್ವ ಯುವ ಕಲಾ ಸಂಘ ಓಬಣ್ಣನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ-13 ಗುಡ್ಡದರಂಗವ್ವನಹಳ್ಳಿಯಲ್ಲಿರುವ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸೌರಭ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಮನಸ್ಸನ್ನು ಅರಳಿಸುತ್ತದೆ. ಕೇವಲ ಹಾಡುಗಾರಿಕೆಯಲ್ಲದೆ ಯಕ್ಷಗಾನ, ಕೋಲಾಟ, ರಂಗಭೂಮಿ, ಜಾನಪದದಲ್ಲಿ ಸಂಗೀತವೇ ಮೇಳೈಸಿದೆ. ಸಂಗೀತದಲ್ಲಿ ಜೀವನವನ್ನೇ ಸವೆಸಿದ ಭೀಮ್‍ಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಇನ್ನು ಅನೇಕ ಸಂಗೀತ ದಿಗ್ಗಜರನ್ನು ಸ್ಮರಿಸಿಕೊಂಡರು.
ಅಡಿಗರು ರಚಿಸಿರುವ ಭೂಮಿಗೀತಾ ನಾಟಕವನ್ನು ಅಭಿನಯಿಸುವಾಗ ಬಿ.ವಿ.ಕಾರಂತರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂತಹ ವೈಚಾರಿಕ ಹಿನ್ನೆಲೆಯಲ್ಲಿ ಕಲಾಕಾರ ಬರೆಯುತ್ತಾನೆ. ಅದಕ್ಕೆ ಸಂಗೀತ ನೀಡಿದರೆ ಮಾಂತ್ರಿಕ ಶಕ್ತಿಯಾಗುತ್ತದೆ. ಕರ್ನಾಟಕದ ಸಿನಿಮಾ ರಂಗದ ಇತಿಹಾಸದಲ್ಲೆ ಅತ್ಯಂತ ಜನಪ್ರಿಯತೆ ಗಳಿಸಿರುವ ರವಿಚಂದ್ರನ್ ಮತ್ತು ಹಂಸಲೇಖರವರು ಜೋಡೆತ್ತಿನ ಬಂಡಿಗಳಂತೆ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಹಾಗಾಗಿ ಹಂಸಲೇಖರವರನ್ನು ನಾದಬ್ರಹ್ಮ ಎಂದು ಕರೆದರೆ
ಸಿ.ಅಶ್ವಥ್‍ರವರನ್ನು ಗಾನ ಗಾರುಡಿಗ ಎಂದು ವರ್ಣಿಸಲಾಗುತ್ತದೆ ಎಂದರು.
ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಶೇಷಾಧಿಕಾರಿ ಡಾ.ರಾಜೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಸುಜಿತ್ ಕುಲಕರ್ಣಿ ಮತ್ತು ತಂಡ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ. ಎಂ.ಕೆ.ಹರೀಶ್ ಮತ್ತು ತಂಡ ಜಾನಪದ ಹಾಡುಗಳನ್ನು ಹಾಡಿದರೆ, ಮೈಲಾರಿ ಎಸ್.ಮತ್ತು ತಂಡ ವಚನ ಸಂಗೀತ. ಮಲ್ಲಿಕಾರ್ಜುನ್ ಎಂ.ಮತ್ತು ತಂಡದವರು ತತ್ವಪದ ಗಾಯನ, ಅಣ್ಣೇಶ್ ಮತ್ತು ತಂಡದವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಬೆಸ್ಕಾಂ ಜಾಗೃತ ದಳದ ಸಬ್‍ಇನ್ಸ್‍ಪೆಕ್ಟರ್ ಯಶೋಧ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವಿಜಯಕುಮಾರ್, ಡಾ.ಮಹಾಂತೇಶ್ ಪಾಟೀಲ್, ಡಾ.ಭೀಮಾಶಂಕರ್ ಜೋಶಿ, ಡಾ.ರೂಪೇಶ್‍ಕುಮಾರ್ ಆರ್, ಡಾ.ಶಾಂತರಾಜ್ ಹೆಚ್, ಗಂಧರ್ವ ಯುವ ಕಲಾ ಸಂಘದ ಕಾರ್ಯದರ್ಶಿ ಹಿಮಂತರಾಜ್ ಇವರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








