Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳಾ ಮೀಸಲಾತಿಯಿಂದ ಬಸವಣ್ಣನವರ 50:50 ಅನುಪಾತದ ಕನಸು ನನಸಾಗಲಿದೆ: ಸಂಸದ ಗೋವಿಂದ ಕಾರಜೋಳ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್‌. 25 : ಜುಲೈನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿ ಮುಂದಿನ ಅಧಿವೇಶನದಲ್ಲಿ ಜಾರಿಗೆ ಬಂದರೆ ಮಹಿಳೆ-ಪುರುಷರು 50:50 ಅನುಪಾತದಲ್ಲಿರುತ್ತಾರೆ. ಇದರಿಂದ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹಾಗೂ ಸಮಕಾಲೀನರು ಕಂಡಿದ್ದ ಕನಸು ನನಸಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

sಸರಸ್ವತಿ ಕಾನೂನು ಕಾಲೇಜಿನಲ್ಲಿ ಮೂರು ವರ್ಷ ಹಾಗೂ ಐದು ವರ್ಷದ ಕಾನೂನು ಪದವಿ ಪಡೆದವರಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಜ್ಯುವೇಷನ್ ಡೇ ಉದ್ಘಾಟಿಸಿ ಮಾತನಾಡಿದರು.

 

ಲೋಕಸಭೆಯಲ್ಲಿ ಈಗ 87 ಮಹಿಳೆಯರಿದ್ದಾರೆ. ಆಡಳಿತದಲ್ಲಿ ಅರ್ಧ ಭಾಗ ಮಹಿಳೆಯರಿರಬೇಕೆಂಬುದು ಪ್ರಧಾನಿ ನರೇಂದ್ರಮೋದಿರವರ ಕನಸು. 5 ಕೋಟಿ 53 ಲಕ್ಷಪ್ರಕರಣಗಳು ದೇಶದಲ್ಲಿ ಇನ್ನು ಇತ್ಯರ್ಥವಾಗಿಲ್ಲ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸತ್ಯ ಮತ್ತು ಧರ್ಮದ ಪರವಾಗಿ ನಿಲ್ಲಿ. ವಕೀಲಿ ವೃತ್ತಿ ಎಂದರೆ ಕೋಟು ಧರಿಸಿ ನ್ಯಾಯಾಲಯದಲ್ಲಿ ವಾದ-ವಿವಾದ ಮಂಡಿಸುವುದಲ್ಲ. ದೇಶದ ಐಕ್ಯತೆ, ಏಕತೆ, ಬಲಿಷ್ಟತೆಗೆ ಕಂಕಣ ಬದ್ದರಾಗಿ ಎಂದು ಕಾನೂನು ಪದವಿ ಪಡೆದವರಿಗೆ ಕರೆ ನೀಡಿದರು.
ಸುಧೀರ್ಘ ಅಧ್ಯಯನ, ನಿರಂತರ ಪರಿಶ್ರಮ, ಬದ್ದತೆಯಿದ್ದರೆ ಪದವಿ ಪಡೆಯಬಹುದು. ಕಾನೂನು ಎಂದರೆ ಕೇವಲ ಕೋರ್ಟ್‍ಗೆ ಹೋಗುವುದಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಪಶು, ಪಕ್ಷಿ, ಪ್ರಾಣಿಗಳಿಗೂ ಬದುಕುವ ಹಕ್ಕು ನೀಡಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರು ಬದುಕಬೇಕಿದೆ ಎಂದು ತಿಳಿಸಿದರು.

 

ಚಿತ್ರದುರ್ಗದಲ್ಲಿ ಕೆಳವರ್ಗ, ಬಡವರು, ಶೋಷಿತರು ವಕೀಲರುಗಳಿದ್ದಾರೆಂದರೆ ಅದಕ್ಕೆ ಸರಸ್ವತಿ ಕಾನೂನು ಕಾಲೇಜು ಕಾರಣ. ವಕೀಲರುಗಳ ಸಂಖ್ಯೆ ಹೆಚ್ಚಾದಂತೆ ವ್ಯಾಜ್ಯಗಳ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದರಿಂದ ಧಾರವಾಡ, ಕಲ್ಬುರ್ಗಿಯಲ್ಲಿ ನ್ಯಾಯ ಪೀಠ ಸ್ಥಾಪಿಸಲಾಗಿದೆ. ಇದರಿಂದ ವಕೀಲರಿಗೆ ಮಹತ್ವ ಬಂದಿದೆ. ಕಾನೂನು ಕ್ಷೇತ್ರ ದೊಡ್ಡ ಕ್ರಾಂತಿಗೆ ಸಾಕ್ಷಿಯಾಗಿದೆ. ದಶಕಗಳಿಂದ ಬದಲಾಗದ ಕಾನೂನನ್ನು ದೇಶದ ಪ್ರಧಾನಿ ನರೇಂದ್ರಮೋದಿ ಬದಲಾವಣೆ ಮಾಡಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮೂಲಕ ಸುಪ್ರೀಂಕೋರ್ಟ್‍ನ್ನು ಕನ್ನಡಕ್ಕೆ ತರ್ಜುಮೆ ಮಾಡಬಹುದು. ಇದರಿಂದ ಬಡ ಕಕ್ಷಿದಾರನಿಗೂ ತೀರ್ಪಿನ ಸಾರಾಂಶ ಅರ್ಥವಾಗುತ್ತದೆ. ದೇಶದ ಪ್ರತಿಯೊಬ್ಬ ಬಡವನಿಗೂ ಕಾನೂನು ರಕ್ಷಾ ಕವಚವಾಗಬೇಕು. ಪದವಿ ಪಡೆದಿರುವ ನೀವುಗಳು ಮುಂದೆ ನ್ಯಾಯವಾದಿಗಳಾದಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಿ ಎಂದು ಸಂಸದ ಗೋವಿಂದ ಎಂ.ಕಾರಜೋಳ ಕಿವಿಮಾತು ಹೇಳಿದರು.
ಸರಸ್ವತಿ ಕಾನೂನು ಕಾಲೇಜಿನ ಕಾರ್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ ಕಾನೂನು ಪಡೆದವರು ವಕೀಲ ವೃತ್ತಿಯಲ್ಲಿ ಯಶಸ್ಸಾಗಬೇಕಾದರೆ ನಿರಂತರ ಪರಿಶ್ರಮ, ಸಮಯಪ್ರಜ್ಞೆ, ಬದ್ದತೆಯಿರಬೇಕು. ವೃತ್ತಿಯಲ್ಲಿ ಸಾಕಷ್ಟು ಅಡ್ವಾಂಟೇಜ್‍ಗಳಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಅನೇಕರು ವಕೀಲರುಗಳಿದ್ದಾರೆ. ತಂದೆ-ತಾಯಿಗಳ ಕನಸು ನನಸು ಮಾಡಿ. ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಎಲ್ಲವನ್ನು ನಿಭಾಯಿಸಿಕೊಂಡು ಮುಂದೆ ಸಾಗಿ. ನಿರ್ಲಕ್ಷೆ ಮಾಡಬೇಡಿ ಎಂದು ಕಾನೂನು ಪದವಿ ಪಡೆದವರಿಗೆ ಮಾರ್ಗದರ್ಶನ ನೀಡಿದರು.

 

ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಎಸ್.ಸುಧಾದೇವಿ ಮಾತನಾಡಿ ಕಾನೂನು ಪದವಿ ಸುಲಭವಾಗಿ ಬಂದಿದ್ದಲ್ಲ. ನಿಮ್ಮಗಳ ಪರಿಶ್ರಮ, ಶ್ರದ್ದೆಯಿದೆ. ಸವಾಲುಗಳನ್ನು ಜೀವನದಲ್ಲಿ ಎದುರಿಸಿ. ಪ್ರಾಮಾಣಿಕತೆ, ನೈತಿಕತೆ, ಮೌಲ್ಯ ಮರೆಯಬೇಡಿ. ಸ್ವಾರ್ಥಕ್ಕೆ ಬದುಕುವ ಬದಲು ಸಮಾಜಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವಿರಲಿ. ತಾಂತ್ರಿಕತೆ ಮುಂಚೂಣಿಯಲ್ಲಿದೆ. ಹೊಸ ಹೊಸ ಕಾನೂನುಗಳು ಜಾರಿಗೆ ಬಂದಾಗ ಅದಕ್ಕೆ ತಕ್ಕಂತೆ ಪರಿಪೂರ್ಣರಾಗಬೇಕು. ಆಗ ಮಾತ್ರ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದೆಂದು ತಿಳಿಸಿದರು.

 

ಹೆಚ್ಚು ಅಂಕ ಪಡೆದ ಹಾಗೂ ಪಠ್ಯೇತರ ವಿಷಯಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕಾನೂನು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಸರಸ್ವತಿ ಕಾನೂನು ಕಾಲೇಜಿನ ಉಪಾಧ್ಯಕ್ಷರಾದ ಫಾತ್ಯರಾಜನ್, ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಅನ್ವರ್  ಇವರುಗಳು ವೇದಿಕೆಯಲ್ಲಿದ್ದರು.
ಪ್ರಥಮ ವರ್ಷದ ಎಲ್.ಎಲ್.ಬಿ.ವಿದ್ಯಾರ್ಥಿ ಪೂರ್ಣಚಂದ್ರ ತೇಜಸ್ವಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ ಸ್ವಾಗತಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಡಿ.ಬಿ. ಕಾನೂನು ವೇದಿಕೆಯ ವಾರ್ಷಿಕ ವರದಿ ಮಂಡಿಸಿದರು. ಸಹಾಯಕ ಪ್ರಾಧ್ಯಾಪಕಿ ಸಾಯಿನಿಕಿತ ಎಂ. ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now