ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 04 : ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಇನ್ನರ್‍ವೀಲ್ಹ್ ಕ್ಲಬ್‍ನಿಂದ ಎಂಬತ್ತು ಬಾಣಂತಿಯರಿಗೆ ಪೌಷ್ಠಿಕಾಂಶದ ಕಿಟ್‍ಗಳನ್ನು ವಿತರಿಸಲಾಯಿತು.
ಬಾಣಂತಿಯರಿಗೆ ಹೆಸರುಕಾಳು, ರವೆ, ಬೆಲ್ಲದ ಪೌಷ್ಟಿಕಾಂಶ ಕಿಟ್‍ಗಳನ್ನು ನೀಡಿ ಮಾತನಾಡಿದ ಮೆದೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ವನಜಾ ಅನಂತರಾಜು ಎರಡು ವರ್ಷಗಳ ಕಾಲ ಬಾಣಂತಿಯರು ಮಗುವಿದೆ ಎದೆಹಾಲು ಉಣಿಸಿದರೆ ಮಕ್ಕಳು ಆರೋಗ್ಯವಾಗಿರುತ್ತಾರೆಂದು ಹೇಳಿದರು.
ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ವೀಣ ಜಯರಾಂ ಮಾತನಾಡಿ ಬಾಣಂತಿಯರು ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ ಎದೆಹಾಲು ವೃದ್ದಿಯಾಗುತ್ತದೆ. ಇದರಿಂದ ಮಕ್ಕಳಿಗೆ ಸತತವಾಗಿ ಎರಡು ವರ್ಷಗಳಾದರು ಹಾಲುಣಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಇನ್ನರ್‍ವೀಲ್ಹ್ ಕ್ಲಬ್ ಕಾರ್ಯದರ್ಶಿ ಶೋಭ ರಾಮಚಂದ್ರ, ಸ್ತ್ರೀರೋಗ ತಜ್ಞರು ಹಾಗೂ ಗಾಯತ್ರಿ ಶಿವರಾಂ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
















