Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ಯಾಗ್ ಸಮೇತ ಶಾಲಾ ಬಾಲಕನ ದೇಹ ಹೂತಿದ್ದೇನೆ : ಕಲ್ಲೇರಿಯತ್ತ ಈಗ ಎಲ್ಲರ ಚಿತ್ತ..!

---Advertisement---

 

ದಕ್ಷಿಣ ಕನ್ನಡ: ಈಗಾಗಲೇ ಅನಾಮಧೇಯ ವ್ಯಕ್ತಿ ತೋರಿಸಿದ 13 ಪಾಯಿಂಟ್ ಗಳ ಶೋಧ ಕಾರ್ಯ ನಡರಯುತ್ತಿದೆ. ಆದರೆ ಇದರ ನಡುವೆ ಈಗ ಮತ್ತೊಂದು ಸ್ಥಳ ಗಮನ ಸೆಳೆದಿದೆ. ದೂರುದಾರ ಕಲ್ಲೇರಿ ಎಂಬ ಸ್ಥಳದ ಬಗ್ಗೆ ಹೇಳಿದ್ದಾರೆ.

13 ಪಾಯಿಂಟ್ ಗಳ ಶೋಧದ ಬಳಿಕ ಕಲ್ಲೇರಿ ರಹಸ್ಯ ಪತ್ತೆಗೆ ಸಿದ್ಧತೆ ನಡೀತಾ ಇದೆ. ದೂರುದಾರ ಆರೋಪಿಸಿದ್ದಂತ ಕಲ್ಲೇರಿ ಬಗ್ಗೆ ಎಸ್ಐಟಿ ತನಿಖೆಗೆ ಮುಂದಾಗಿದೆ. ಶಾಲಾ ಬಾಲಕಿ ರೇ* ಹಾಗೂ ಮರ್ಡರ್ ಬಗ್ಗೆ ದೂರುದಾರ ಹೇಳಿಕೆಯನ್ನು ನೀಡಿದ್ದರು. ಅತಿ ಗಂಭೀರವಾದ ಆರೋಪದ ಕಡೆಗೆ ಎಸ್ಐಟಿ ಅಧಿಕಾರಿಗಳು ದೃಷ್ಟಿಯನ್ನ ನೆಟ್ಟಿದ್ದಾರೆ.

ಆ ಘಟನೆ ಬಗ್ಗೆ ವಿವರಣೆ ನೀಡಿರುವ ದೂರುದಾರ ಅನಾಮಧೇಯ ವ್ಯಕ್ತಿ, ವಯಸ್ಸು 12 ರಿಂದ 15 ವರ್ಷಗಳ ನಡುವೆ ಅಂತರವಿತ್ತು. ಆ ಬಾಲಕಿ ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಅವಳ ಲಂಗ ಮತ್ತು ಒಳುಡುಪು ಇರಲಿಲ್ಲ. ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣ ಕಾಣಿಸ್ತಾ ಇತ್ತು. ಅಷ್ಟೇ ಅಲ್ಲ ಅವಳ ಕುತ್ತಿಗೆ ಹಿಸುಕಿರುವ ಗುರುತುಗಳು ಇದ್ದವು. ನನಗೆ ಗುಂಡಿ ಅಗೆಯಲು ನಿರ್ದೇಶನ ನೀಡಿದ್ದರು. ಅವಳ ಶಾಲಾ ಬ್ಯಾಗ್ ನೊಂದಿಗೆ ಹೂಳುವುದಕ್ಕೆ ಹೇಳಿದ್ರು. ಆ ಸನ್ನಿವೇಶ ನನಗೆ ಇಂದಿಗೂ ಮಾಸಿಲ್ಲ. ನಾನು ಹದಿಹರೆಯದ ಹುಡುಗಿ ಮೃತದೇಹ ನೋಡಿದ್ದೆ ಎಂದು ದೂರುದಾರ ಹೇಳಿದ್ದಾರೆ. ಬಾಲಕಿಯ ವಿಚಾರ ಹೇಳಿದ ಕಾರಣ ಇದೀಗ ಎಸ್ಐಟಿ ಅಧಿಕಾರಿಗಳು ಕಲ್ಲೇರಿಯಲ್ಲೂ ಪರಿಶೀಲನೆ ನಡೆಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಬ್ಯಾಗ್ ಸಮೇತ ಹೂತು ಹಾಕಲು ಹೇಳಿದ್ದರು ಎಂದು ಆತ ಹೇಳಿದ್ದು, ಅಲ್ಲಿ ಯಾವೆಲ್ಲಾ ಸಾಕ್ಷಿ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment