ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳ ಕಾರ್ಯಾಚರಣೆ ಜೋರಾಗಿಯೇ ನಡೆಯುತ್ತಿದೆ. ಮಾಸ್ಕ್ ಧರಿಸಿದ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲಾ ಮಾರ್ಕ್ ಮಾಡಿರುವ ಅಧಿಕಾರಿಗಳು, ಗುರುತು ಹಾಕಿರೋ ಸ್ಥಳದಲ್ಲೆಲ್ಲಾ ಅಗೆದು ನೋಡುತ್ತಿದ್ದಾರೆ. ಕೆಲವೊಂದು ಭಾಗದಲ್ಲಿ ವಸ್ತುಗಳು, ಮೂಳೆಗಳು ಸಿಕ್ಕರೆ, ಇನ್ನು ಕೆಲವೊಂದು ಭಾಗದಲ್ಲಿ ಏನು ಸಿಕ್ತಾ ಇಲ್ಲ. ಇಂದು ಕೂಡ ಶೋಧ ಕಾರ್ಯ ಮುಂದುವರೆದಿದ್ದು, ಎಂಟನೇ ಸ್ಥಳದತ್ತ ಎಸ್ಐಟಿ ಅಧಿಕಾರಿಗಳು ಸಾಗಿದ್ದಾರೆ.
ಇಂದು ಗುರುತು ಮಾಡಿದ ಏಳನೇ ಸ್ಥಳವನ್ನು ಆಳದವರೆಗೆ ಅಗೆಯಲಾಗಿದೆ. ಆದರೆ ಅಲ್ಲಿ ಏನು ಸಿಕ್ಕಿಲ್ಲ. ಹೀಗಾಗಿ 8ನೇ ಪಾಟಿಂಟ್ ನಲ್ಲಿ ಶೋಧ ಕಾರ್ಯ ಶುರುವಾಗಿದೆ. 7ನೇ ಪಾಯಿಂಟ್ 300 ಮೀಟರ್ ನಲ್ಲಿ 8ನೇ ಪಾಯಿಂಟ್ ಇದೆ. ಅಲ್ಲಿನ ಸುತ್ತಮುತ್ತ ಪರದೆಯನ್ನು ಕಟ್ಟಿ ಗೌಪ್ಯತೆಯನ್ನ ಕಾಪಾಡಿಕೊಳ್ಳಲಾಗಿದೆ. ಬಳಿಕ ಶೋಧ ಕಾರ್ಯವನ್ನು ಶುರು ಮಾಡಿದ್ದಾರೆ. ಏಳನೇ ಪಾಯಿಂಟ್ ನಲ್ಲಿ 5 ಅಡಿಗಳಷ್ಟು ಜಾಗವನ್ನು ಅಗೆದಿದ್ದಾರೆ. ಆದರೆ ಅಲ್ಲಿ ಏನು ಸಿಕ್ಕಿಲ್ಲ.
ಧರ್ಮಸ್ಥಳದ ಅಸ್ಥಿಪಂಜರ ಕೇಸ್ ಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲೂ ಕೂಡ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಹೀಗಾಗಿ ಓಡಾಡುವ ಜನರು ಕೂಡ ಅಲ್ಲಿ ಏನಾಗ್ತಿದೆ, ಹೆಣ ಸಿಕ್ತಾ, ಅಸ್ಥಿಪಂಜರ ಸಿಕ್ತಾ ಎಂಬೆಲ್ಲಾ ಕುತೂಹಲವನ್ನ ಬೆಳೆಸಿಕೊಂಡಿದ್ದಾರೆ. ಶೋಧಕಾರ್ಯ ನಡೆಯುವ ಜಾಗದಲ್ಲಿ ನೋಡುತ್ತಾ ನಿಲ್ಲುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಗುರುತು ಮಾಡಿದ ಸ್ಥಳವನ್ನು ಅಗೆಯುವ ಮುನ್ನ ಭದ್ರತೆ ಮಾಡಿಕೊಳ್ಳುತ್ತಿದ್ದಾರೆ. 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಸಿಕ್ಕ ಬಳಿಕ ಭದ್ರತೆ ಮಾಡುತ್ತಿದ್ದಾರೆ. ಇವತ್ತಿನ 8ನೇ ಪಾಯಿಂಟ್ ನಲ್ಲೇನಾದರೂ ಸಿಗಬಹುದಾ ಎಂಬ ಕುತೂಹಲವೂ ಜನರಲ್ಲಿ ಇದೆ. ಸಂಜೆವರೆಗೂ ಕಾದುನೋಡಬೇಕಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






