4ನೇ ಬಾರಿಗೆ ಭರ್ತಿಯಾಗುವತ್ತ ವಾಣಿ ವಿಲಾಸ ಸಾಗರ..!

1 Min Read

ಚಿತ್ರದುರ್ಗ: ಜಲಾಶಯಗಳು ರೈತರ ಜೀವನಾಡಿಯಾಗಿರುತ್ತವೆ. ಜಲಾಶಯಗಳು ತುಂಬಿದರೆ ಕೃಷಿಗೆ, ಜಾನುವಾರುಗಳಿಗೆ ತೊಂದರೆಯಿರಲ್ಲ. ನೆಮ್ಮದಿಯಾಗಿರುತ್ತವೆ, ಬೆಳೆಯೂ ಕೈಗತ್ತುತ್ತದೆ. ಚಿತ್ರದುರ್ಗದ ಜನ ಕಳೆದ ವರ್ಷವೂ ಖುಷಿಯಾಗಿದ್ರು, ಈ ವರ್ಷವೂ ಅದೇ ಸಂತಸ ಮುಂದುವರೆಯುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದಾವೆ. ಅದಕ್ಕೆ ಕಾರಣ ವಾಣಿ ವಿಲಾಸ ಜಲಾಶಯ. ಹೌದು ಕಳೆದ ಬಾರಿ ಕೋಡಿ ಬಿದ್ದಿದ್ದ ಜಲಾಶಯ, ಈ ಬಾರಿಯೂ ತುಂಬುವ ಲಕ್ಷಣಗಳು ಕಾಣಿಸುತ್ತಿವೆ.

ಹಾಗೇನಾದ್ರೂ ಆದ್ರೆ 4ನೇ ಬಾರಿ ತುಂಬಿದ ಇತಿಹಾಸ ನಿರ್ಮಿಸಲಿದೆ. ರಾಜ್ಯದಲ್ಲಿ ಆರಂಭದಿಂದಾನೇ ಮಳೆಯ ಪ್ರಮಾಣ ಜೋರಾಗಿದೆ. ಅಷ್ಟೇ ಅಲ್ಲದೆ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಯತ್ತ ನೀರು ಹರಿಯಲಿದೆ. ಜುಲೈ 27ರಿಂದ ನಾಲ್ಕು ತಿಂಗಳವರೆಗೆ ನೀರು ಬರುವ ಕಾರಣ ವರ್ಷದಲ್ಲಿಯೇ ಎರಡನೇ ಬಾರಿಗೆ ಜಲಾಶಯ ತುಂಬುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಜುಲೈ 27ರಿಂದ ನಾಲ್ಕು ತಿಂಗಳು ಕಾಲುವೆಗುಂಟ ನೀರು ಹರಿದರೆ ತರೀಕೆರೆ, ಕಡೂರು, ಹೊಸದುರ್ಗ ಭಾಗದ ಕೆರೆಗಳು ತುಂಬಿ, ವಾರದೊಳಗೆ ಜಲಾಶಯಕ್ಕೆ ನೀರು ಬರುತ್ತದೆ.

ನಿತ್ಯವು ಕನಿಷ್ಠ 600 ಜ್ಯುಸೆಕ್ ನೀರು ಜಲಾಶಯದತ್ತ ಬರಲಿದೆ. ಜೊತೆಗೆ ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯೂ ಬರುತ್ತಿರುವುದರಿಂದ ವೇದಾವತಿ ನದಿ ತುಂಬಿ ಹರಿದು, ಜಲಾಶಯದ ಒಳಹರಿವು ಹೆಚ್ಚಾಗಲಿದೆ‌. ಇದರಿಂದಾಗಿ ನವೆಂಬರ್ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಜಲಾಶಯದಲ್ಲಿ 123.80 ಅಡಿ ನೀರೊದೆ. ಹೊರಗಿನಿಂದಾನೂ ನೀರು ಬಂದು, ಮಳೆಯೂ ಬರ್ತಾ ಇರೋ ಕಾರಣ ಕಳೆದ ವರ್ಷಕ್ಕಿಂತ ಬಹಳ ಬೇಗನೇ ಜಲಾಶಯ ತುಂಬುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದಾವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks