ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 17 :
ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯಳಾಗಿದ್ದೇಯೇ ಅದೇ ಉದ್ದೇಶಕ್ಕೆ ಬಳಕೆ ಮಾಡುವುದರ ಮೂಲಕ ನಮ್ಮ ಅರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಕೊಳ್ಳಬೇಕಿದೆ ಅದೇ ರೀತಿ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಯನ್ನು ಮಾಡುವುದರ ಮೂಲಕ ಬೇರೆಯವರು ಸಾಲವನ್ನು ಪಡೆಯಲು ನೆರವಾಗಬೇಕಿದೆ ಎಂದು ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ್ ಕರೆ ನೀಡಿದರು.
ಚಿತ್ರದುರ್ಗ ನಗರದ ಬರಗೇರಮ್ಮ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ (AKMI)ಇದರ ವತಿಯಿಂದ ಏರ್ಪಡಿಸಲಾಗಿದ್ದ ಆರ್ಥಿಕ ಸಾಕ್ಷರತಾ ಸಮಲೋಚನಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಹಾಗು ಮೈಕ್ರೋ ಫೈನಾನ್ಸ್ ಮೂಲಕ ಸಾಲವನ್ನು ಪಡೆಯಲು ಮುಂದಾದರೆ ದಾಖಲಾತಿಗಳು ಸರಿ ಇರಬೇಕು ಸಾಲವನ್ನು ಮರುಪಾವತಿ ಮಾಡಲು ಅರ್ಥಿಕವಾಗಿ ಶಕ್ತರಾಗಿರಬೇಕು ಸೇರಿದಂತೆ ಇತರೆ ನಿಯಮಗಳಿಗೆ ನಾವು ಬದ್ದರಾಗಿ ಇರಬೇಕಿದೆ,
ಇಂದಿನ ದಿನಮಾನದಲ್ಲಿ ಬಹಳಷ್ಟು ಜನ ತಾವು ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡದೆ ಮತ್ತೇ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ತಾವು ಪಡೆದ ಸಾಲವನ್ನು ಹಬ್ಬ, ಜಾತ್ರೆ, ಬಾಡೂಟವನ್ನು ಮಾಡುವುದರ ಮೂಲಕ ಹಾಳು ಮಾಡಿಕೊಳ್ಳುತ್ತಾರೆ. ಇದನ್ನು ತೀರಿಸಲು ಮತ್ತೇ ಬೇರೆ ಕಡೆಯಲ್ಲಿ ಸಾಲವನ್ನು ಮಾಡುತ್ತಾ ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದರ ಬದಲಾಗಿ ನಾವು ಯಾವ ಉದ್ದೇಶಕ್ಕೆ ಸಾಲವನ್ನು ಪಡೆಯಲಾಗಿದೆಯೋ ಅದಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಾಲವನ್ನು ಸಕಾಲಕ್ಕೆ ಮರುಪಾವತಿಯನ್ನು ಮಾಡುವುದರ ಮೂಲಕ ಸಾಲವನ್ನು ಪಡೆದವರಲ್ಲಿ ಉತ್ತಮ ಗ್ರಾಹಕ ಎಂಬ ಬಿರುದನ್ನು ಪಡೆಯಿರಿ ಎಂದು ಉಮೇಶ್ ಈಶ್ವರ ನಾಯ್ಕ್ ಕರೆ ನೀಡಿದರು.
ಈ ರೀತಿಯಾದ ಕಿರು ಹಣಕಾಸು ಸಂಸ್ಥೆಗಳಿಂದ ಕಡಿಮೆ ದಾಖಲಾಯನ್ನು ನೀಡುವುದರ ಮೂಲಕ ಸಾಲವನ್ನು ಶೀಘ್ರವಾಗಿ ಪಡೆÉಯುವುದರ ಮೂಲಕ ನಮ್ಮ ಕೆಲಸವನ್ನು ಪ್ರಾರಂಭ ಮಾಡಬಹುದಾಗಿದೆ, ಇತ್ತಿಚಿನ ದಿನದಲ್ಲಿ ಸಾಲವನ್ನು ಕೂಡುವುದಾಗಿ ಆಪ್ ಮೂಲಕ ಜನತೆಯನ್ನು ಮೋಸ ಮಾಡುವ ಜಾಲ ಹೆಚ್ಚಾಗಿದೆ ಇದರ ಬಗ್ಗೆ ಎಚ್ಚರವಾಗಿ ಇರಬೇಕಿದೆ ಈ ರೀತಿಯಾದ ಆಪ್‍ಗಳನ್ನು ನಂಬದೆ ನೇರವಾಗಿ ಸಾಲವನ್ನು ನೀಡುವವರ ಹತ್ತಿರ ಸಾಲವನ್ನು ಪಡೆಯಬೇಕಿದೆ ಎಂದರು.
ಲೀಡ್ ಬ್ಯಾಂಕ್‍ನ ಎಲ್‍ಡಿಎಂ, ರಾಘವೇಂದ್ರ ಎಮ್ ಮಾತನಾಡಿ, ಲೀಡ್ ಬ್ಯಾಂಕ್ ಜಿಲ್ಲೆಯಲ್ಲಿ ನಡೆಯುವ ಹಣಕಾಸು ಸಂಸ್ಥೆಗಳ ಮೇಲುಸ್ತುವಾರಿಯನ್ನು ನಡೆಸುತ್ತಿದೆ ಬ್ಯಾಂಕ್‍ನಲ್ಲಿ ಏನಾದರೂ ಮೋಸವಾದರೆ ಅದರ ಪರಿಹಾರಕ್ಕೆ ನಮ್ಮ ಮಧ್ಯಸ್ಥಿಕೆ ಇದೆ. ಸಾಲವನ್ನು ಪಡೆದವರು ಕಿರುಕುಳವನ್ನು ಅನುಭವಿಸುತ್ತಿದ್ದೆರೆ ಅದರೆ ಬಗ್ಗೆಯೂ ಸಹಾ ಲೀಡ್ ಬ್ಯಾಂಕ್ ಕಾಳಜಿಯನ್ನು ವಹಿಸುತ್ತದೆ. ಎಲ್ಲಾ ಹಣಕಾಸು ಸಂಸ್ಥೆಗಳು ಸಹಾ ಆರ್,ಬಿ.ಐ,ನ ನಿರ್ದೆಶನದಂತೆ ನಡೆಯುತ್ತದೆ.
ಕಿರು ಹಣಕಾಸು ಸಂಸ್ಥೆಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ಸಂಗ್ರಹ ಮಾಡಿ ಸಾಲವನ್ನು ನೀಡಿ ಸಾಲದ ಕಂತನ್ನು ತುಂಬಲು ಅವರೇ ಮನೆ ಬಾಗಿಲಿಗೆ ಬರುತ್ತಾರೆ. ಗ್ರಾಹಕ ಹಣವನ್ನು ಪಡೆಯಲು ಹಣವನ್ನು ಕಟ್ಟಲು ಎಲ್ಲಿಯೂ ಹೋಗಬೇಕಿಲ್ಲ ಎಂದರು.
ಕೇಂದ್ರ ಸರ್ಕಾಋ ಜನರ ಒಳಿಒತಿಗಾಗಿ ಉತ್ತಮವಾದ ಯೋಜನೆಯನ್ನು ಜಾರಿ ಮಾಡಿದೆ ಇದರ ಮೂಲಕ ತಮ್ಮ ಆರೋಗ್ಯ, ಅಪಘಾತ ವಿಮೆ, ಪಿಂಚಿಣಿಯನ್ನು ಸಹಾ ಪಡೆಯಬಹುದಾಗಿದೆ. ಸಾಲವನ್ನು ಪಡೆಯುವವರನ್ನು ಈ ಯೋಜನೆಎಗ ಒಳಪಡಿಸಿದಾಗ ಅವರ ಜೀವನಕ್ಕೆ ಅನುಕೂಲವಾಗಲಿದೆ ಎಂದ ಅವರು, ಖರ್ಚು ಮಾಡುವುದು ಸುಲಭ ಆದರೆ ದುಡಿಮೆ ಮಾಡುವುದು ಕಷ್ಟ ಸಾಲವನ್ನು ಪಡೆಯುವಾಗ ಅದನ್ನು ತೀರಿಸುತ್ತೇನೆ ಎಂಬ ನಂಬಿಕೆ ಇರಬೇಕು ಎಂದರು.
ರುಡ್ ಸೆಟ್ ನಿರ್ದೆಶಕರಾದ ಬಸವರಾಜು ಮಾತನಾಡಿ, ನಮ್ಮ ಸಂಸ್ಥೆವತಿಯಿಂದ ಸುಮಾರು 30 ಕೋರ್ಸ ಗಳ ಬಗ್ಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ಪಡೆಯುವುದರ ಮೂಲಕ ನಿಮ್ಮ ಸ್ವಂತ ಕಾಲ ಮೇಲೆ ನಿಲ್ಲಬಹುದು ಇಲ್ಲವಾದರೆ ಬೇರೆ ಕಡೆಯಲ್ಲಿ ಕೆಲಸ ಮಾಡಿ ಬದುಕನ್ನು ನಡೆಸಬಹುದಾಗಿದೆ. ದೇಶದಲ್ಲಿ 146 ಕೋಟಿ ಜನ ಸಂಖ್ಯೆ ಇದೆ ಇದರಲ್ಲಿ ಶೇ. 40 ರಷ್ಟು ಯುವ ಜನತೆ ಇದೆ ಇವರು ಕೆಲಸಕ್ಕಾಗಿ ಸರ್ಕಾರವನ್ನು ಅವಲಂಬಿಸಿದೆ ನಮ್ಮಲ್ಲಿ ನೀಡುವ ತರಬೇತಿಯನ್ನು ಪಡೆಯುವುದರ ಮೂಲಕ ಸ್ವಾವಲಂಬಿಯಾಗಿ ಜೀವನವನ್ನು ನಡೆಸಬಹುದಾಗಿದೆ ಎಂದರು.
ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ(AKMI) ಸಿಇಓ ವಿ.ಎನ್. ಹೆಗಡೆ ಮಾತನಾಡಿ, ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟವೂ ಸುಮಾರು 1 ಕೋಟಿ ಖಾತೆಯನ್ನು ಹೊಂದಿದ್ದು ಇದರಲ್ಲಿ 60 ಸಾವಿರ ಕೋಟಿ ಸಾಲವನ್ನು ನೀಡಿದೆ, ಕಳೆದ 30 ವರ್ಷದಿಂದ ನಿರಂತರವಾಗಿ ಉತ್ತಮವಾದ ಕೆಲಸವನ್ನು ಮಾಡುತ್ತಾ ಬಂದಿದೆ, ನಮ್ಮ AKMI) ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದಿಂದ ಕಡಿಮೆ ದಾಖಲಾತಿಯನ್ನು ಪಡೆಯುವುದರ ಮೂಲಕ ಶೀಘ್ರವಾಗಿ ಸಾಲವನ್ನು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ, ವೆಂಕಟೇಶ್, ಶಿವಲಿಂಗಯ್ಯ, ಮಂಜುನಾಥ್, ದಿಲೀಪ್, ರಾಮಚಂದ್ರ ಕುಲಕರ್ಣಿ ಭಾಗವಹಿಸಿದ್ದರು. ಸರೋಜಮ್ಮ ಪ್ರಾರ್ಥಿಸಿದರೆ, ಹೆಗಡೆ ಸ್ವಾಗತಿಸಿದರು ವಿರೇಶ್ ಕಾರ್ಯಕ್ರಮ ನಿರೂಪಿಸಿದರು.
















