ತುಮಕೂರು: ಸಿಲಿಕಾನ್ ಸಿಟಿ ಮಹಾಸಾಗರ. ಇಲ್ಲಿ ಐಟಿ ಬಿಟಿ ಕಂಪನಿಗಳಿಗೇನು ಕಡಿಮೆ ಇಲ್ಲ. ಐಟಿ ಬಿಟಿ ಕಂಪನಿಗಳ ಹಬ್ ಅಂತಾನೇ ಕರೆಸಿಕೊಳ್ಳುವ ಬೆಂಗಳೂರು, ನಾನಾ ರಾಜ್ಯಗಳ ಜನರಿಗೆ ಆಶ್ರಯತಾಣವಾಗಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ, ಭೂಮಿ ಬೆಲೆ ಗಗನಕ್ಕೇರಿದೆ. ಇದೀಗ ಇಲ್ಲಿನ ಐಟಿಬಿಟಿ ಕಂಪನಿಗಳನ್ನ ತುಮಕೂರಿಗೂ ಸೆಳೆಯುವ ಪ್ರಯತ್ನವನ್ನ ತುಮಕೂರು ಡಿಸಿ ಮಾಡ್ತಾ ಇದ್ದಾರೆ. ಕಾರಣ ತುಮಕೂರಿನ ನಾಲ್ಕೈದು ಸಾವಿರ ಮಂದಿ ಪ್ರತಿದಿನವೂ ಬೆಂಗಳೂರಿಗೆ ಓಡಾಟ ನಡೆಸುತ್ತಾರೆ. ಹೀಗಾಗಿ ತುಮಕೂರಿಗೆ ಶಿಫ್ಟ್ ಆದ್ರೆ ಓಡಾಟವೂ ನಿಲ್ಲುತ್ತದೆ ಎಂಬ ಉದ್ದೇಶ.
ಐಟಿ, ಬಿಟಿ ಕಂಪನಿಗಳಿಗೆ ಡಿಸಿ ಶುಭ ಕಲ್ಯಾಣ್ ಹಾಗೂ ಜಿಲ್ಲಾಡಳಿತ ಸ್ವಾಗತವನ್ನ ಕೋರಿದೆ. ಅಷ್ಟೆ ಅಲ್ಲ ಐಟಿ, ಬಿಟಿ ಕಂಪನಿಗಳಿಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಬೆಂಗಳೂರಿನ ಐಟಿ ಕಂಪನಿಗಳ ಜೊತೆಗೆ ತುಮಕೂರು ಡಿಸಿ ಸಭೆ ನಡೆಸಿದ್ದಾರೆ. ಪ್ರತಿದಿನ ಸುಮಾರು 70 ಕಿಲೋ ಮೀಟರ್ ದೂರ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಐಟಿ ಕಂಪನಿಗಳು ತುಮಕೂರಿಗೆ ಶಿಫ್ಟ್ ಆದ್ರೆ ಇಲ್ಲಿನ ಜನರ ಓಡಾಟವೂ ತಪ್ಪುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರು ಶೈಕ್ಷಣಿಕ ನಗರಿ. ಬೇರೆ ಬೇರೆ ರಾಜ್ಯದಿಂದ ಓದುವುದಕ್ಕೆ ಅಂತಾನೆ ಇಲ್ಲಿಗೆ ಬರ್ತಾರೆ. ನಾನಾ ಕೋರ್ಸ್ ಗಳನ್ನ ಮಾಡ್ತಾರೆ. ತುಮಕೂರಿನಲ್ಲಿಯೇ ಉದ್ಯೋಗ ಸೃಷ್ಟಿಯಾದರೆ ಇಲ್ಲಿ ಓದುವವರಿಗೂ ಅನುಕೂಲವಾಗುತ್ತದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಪ್ರಯತ್ನ ಫಲಿಸಿದರೆ ಖಂಡಿತ ದೊಡ್ಡ ಮಟ್ಟದಲ್ಲಿಯೇ ತುಮಕೂರು ಬೆಳೆಯುತ್ತದೆ. ಬೆಂಗಳೂರೆಂಬ ದೊಡ್ಡ ಸಿಟಿಯ ಪಕ್ಕದಲ್ಲೇ ಇದ್ದರು, ಹೇಳಿಕೊಳ್ಳುವಂತ ಅಭಿವೃದ್ಧಿಯನ್ನ ತುಮಕೂರು ಕಂಡಿಲ್ಲ ಅನ್ನೋದೇ ತುಮಕೂರು ಜನತೆಯ ಬೇಸರವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










