ಈ ಮೊದಲೆಲ್ಲಾ ಇಂಜಿನಿಯರಿಂಗ್ ಮಾಡೋದೆ ದೊಡ್ಡ ಸಾಹಸ ಎಂಬಂತ ಸಮಯವಿತ್ತು. ಆದರೆ ಈಗಿನ ದಿನಗಳಲ್ಲಿ ಎಲ್ಲರೂ ಇಂಜಿನಿಯರ್ಸ್ ಗಳೇ ಆಗಿದ್ದಾರೆ. ಹೀಗಾಗಿ ಕೆಲಸ ಸಿಗುವುದು ಬಹಳಷ್ಟು ಕಷ್ಟಸಾಧ್ಯವಾಗಿದೆ. ಎಷ್ಟೋ ಕಂಪನಿಗಳಲ್ಲಿ ಇಂಜಿನಿಯರ್ಸ್ ಗಳನ್ನೇ ತೆಗೆಯುತ್ತಿದ್ದಾರೆ. ಈಗ ಕೆಲವು ಕೋರ್ಸ್ ಗಳ ಸುದ್ದಿಗೆ ಸ್ಟುಡೆಂಟ್ಸ್ ಹೋಗ್ತಿಲ್ಲ. ಈ ಹಿನ್ನೆಲೆ ಸರ್ಕಾರವೇ ಆ ಕೋರ್ಸ್ ಗಳನ್ನು ಕಲಿಯುವವರಿಗೆ ಶುಲ್ಕದಲ್ಲಿ ಸುಮಾರು 50% ರಿಯಾಯಿತಿಯನ್ನು ನೀಡುತ್ತಿದೆ.
ಮೆಕ್ಯಾನಿಕಲ್, ಸಿವಿಲ್ ಇಂಜಿನಿಯರಿಂಗ್, ಆಟೋ ಮೊಬೈಲ್, ಟೆಕ್ಸ್ ಟೈಲ್ ಟೆಕ್ನಾಲಜಿ, ಸಿಲ್ಕ್ ಟೆಕ್ನಾಲಜಿ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಶುಲ್ಕ ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಗೆಜೆಟ್ ಅಧಿಸೂಚನೆಯನ್ನ ಈಗಾಗಲೇ ಹೊರಡಿಸಿದೆ. ಈ ಐದು ಕೋರ್ಸ್ ಗಳಿಗೆ 2025-26ನೇ ಸಾಲಿನಲ್ಲಿ ಶೇಕಡ 50% ರಿಯಾಯಿತಿಯನ್ನು ನೀಡಲಾಗುತ್ತಿದೆ. ಆದರೆ ಬೇಡಿಕೆ ಇರುವ ಕೋರ್ಸ್ ಗಳಿಗೆ ಶುಲ್ಕವನ್ನ ಹೆಚ್ಚಳ ಮಾಡಿದೆ.
ಕಳೆದ ವರ್ಷ ಮೆಕ್ಯಾನಿಕಲ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೀಟು ಇದ್ದರು ಖಾಲಿ ಹೊಡೆಯುತ್ತಿದ್ದವು ಕಾಲೇಜುಗಳು. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5,723 ಸೀಟುಗಳು ಲಭ್ಯವಿದ್ದವು. ಇವುಗಳ ಪೈಕಿ 2,883 ಮಾತ್ರ ಭರ್ತಿ ಆಗಿದ್ದವು. ಉಳಿದ ಸೀಟುಗಳು ಅಭ್ಯರ್ಥಿಗಳಿಲ್ಲದೆ ಖಾಲಿ ಇದ್ದವು. ಹಾಗೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿಯೂ 5,977 ಸೀಟುಗಳು ಲಭ್ಯ ಇದ್ದರು ಕೂಡ 2,783 ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಅರ್ಧಕ್ಕೆ ಅರ್ಧ ಕೂಡ ಪೂರ್ಣವಾಗಿರಲಿಲ್ಲ. ಹೀಗಾಗಿ ಈ ಬಾರಿ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡಿದೆ.










