Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂಜಿನಿಯರಿಂಗ್ ನ ಈ ಐದು ಕೋರ್ಸ್ ಗಳ ಶುಲ್ಕದಲ್ಲಿ 50% ರಿಯಾಯಿತಿ : ಯಾಕೆ ಗೊತ್ತಾ..?

---Advertisement---

ಈ ಮೊದಲೆಲ್ಲಾ ಇಂಜಿನಿಯರಿಂಗ್ ಮಾಡೋದೆ‌ ದೊಡ್ಡ ಸಾಹಸ ಎಂಬಂತ ಸಮಯವಿತ್ತು. ಆದರೆ ಈಗಿನ ದಿನಗಳಲ್ಲಿ ಎಲ್ಲರೂ ಇಂಜಿನಿಯರ್ಸ್ ಗಳೇ ಆಗಿದ್ದಾರೆ. ಹೀಗಾಗಿ ಕೆಲಸ ಸಿಗುವುದು ಬಹಳಷ್ಟು ಕಷ್ಟಸಾಧ್ಯವಾಗಿದೆ. ಎಷ್ಟೋ ಕಂಪನಿಗಳಲ್ಲಿ ಇಂಜಿನಿಯರ್ಸ್ ಗಳನ್ನೇ ತೆಗೆಯುತ್ತಿದ್ದಾರೆ. ಈಗ ಕೆಲವು ಕೋರ್ಸ್ ಗಳ ಸುದ್ದಿಗೆ ಸ್ಟುಡೆಂಟ್ಸ್ ಹೋಗ್ತಿಲ್ಲ. ಈ ಹಿನ್ನೆಲೆ ಸರ್ಕಾರವೇ ಆ ಕೋರ್ಸ್ ಗಳನ್ನು ಕಲಿಯುವವರಿಗೆ ಶುಲ್ಕದಲ್ಲಿ ಸುಮಾರು 50% ರಿಯಾಯಿತಿಯನ್ನು ನೀಡುತ್ತಿದೆ.

ಮೆಕ್ಯಾನಿಕಲ್, ಸಿವಿಲ್ ಇಂಜಿನಿಯರಿಂಗ್, ಆಟೋ ಮೊಬೈಲ್, ಟೆಕ್ಸ್ ಟೈಲ್ ಟೆಕ್ನಾಲಜಿ, ಸಿಲ್ಕ್ ಟೆಕ್ನಾಲಜಿ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಶುಲ್ಕ ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಗೆಜೆಟ್ ಅಧಿಸೂಚನೆಯನ್ನ ಈಗಾಗಲೇ ಹೊರಡಿಸಿದೆ. ಈ ಐದು ಕೋರ್ಸ್ ಗಳಿಗೆ 2025-26ನೇ ಸಾಲಿನಲ್ಲಿ ಶೇಕಡ 50% ರಿಯಾಯಿತಿಯನ್ನು ನೀಡಲಾಗುತ್ತಿದೆ. ಆದರೆ ಬೇಡಿಕೆ ಇರುವ ಕೋರ್ಸ್ ಗಳಿಗೆ ಶುಲ್ಕವನ್ನ ಹೆಚ್ಚಳ ಮಾಡಿದೆ.

ಕಳೆದ‌ ವರ್ಷ ಮೆಕ್ಯಾನಿಕಲ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೀಟು ಇದ್ದರು ಖಾಲಿ ಹೊಡೆಯುತ್ತಿದ್ದವು ಕಾಲೇಜುಗಳು. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5,723 ಸೀಟುಗಳು ಲಭ್ಯವಿದ್ದವು. ಇವುಗಳ ಪೈಕಿ 2,883 ಮಾತ್ರ ಭರ್ತಿ ಆಗಿದ್ದವು. ಉಳಿದ ಸೀಟುಗಳು ಅಭ್ಯರ್ಥಿಗಳಿಲ್ಲದೆ ಖಾಲಿ ಇದ್ದವು. ಹಾಗೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿಯೂ 5,977 ಸೀಟುಗಳು ಲಭ್ಯ ಇದ್ದರು ಕೂಡ 2,783 ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಅರ್ಧಕ್ಕೆ ಅರ್ಧ ಕೂಡ ಪೂರ್ಣವಾಗಿರಲಿಲ್ಲ. ಹೀಗಾಗಿ ಈ ಬಾರಿ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment