Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಆರ್ ಪಾಟೀಲ್ ಹೇಳಲಿ.. ಇಕ್ಬಾಲ್ ಹೇಳಲಿ : ಸಿದ್ದರಾಮಯ್ಯ ಸಿಎಂ ಅನ್ನೋದಕ್ಕೆ ಡಿಕೆಶಿ ಹೇಳಿದ್ದೇನು..?

---Advertisement---

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಸಿಎಂ ಬದಪಾವಣೆ ಇರಬಹದು, ಕೆಪಿಸಿಸಿ ಅಧ್ಯಕ್ಚರ ಬದಲಾವಣೆ ಇರಬಹುದು ಹೀಗೆ ನಾನಾ ವಿಚಾರಗಳು ಚರ್ಚೆಯಾಗುತ್ತಿವೆ. ಇದರ ನಡುವೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಇತ್ತೀಚೆಗೆ ಒಂದು ಮಾತನ್ನ ಹೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದರು. ಇದೀಗ ಆ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಗೂ ಹೇಳೋದಷ್ಟೆ, ಬಿ ಆರ್ ಪಾಟೀಲ್ ಗೆ ಹೇಳೋದಷ್ಟೇ, ಬಾಲಕೃಷ್ಣಗೆ ಹೇಳೋದು ಅಷ್ಟೇ. ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರಿದ್ದಾರೆ. ಅವರ ಕೈ ಬಲಪಡಿಸುವುದು ನಮ್ಮ ಸರ್ಕಾರದ ಮೇಲಿದೆ ಎಂದು ಬಹಿರಂಗವಾಗಿ ಮಾತನಾಡುವವರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.

ಇದೇ ವೇಳೆ ಅನುದಾನದ ವಿಚಾರದ ಬಗ್ಗೆ ಮಾತನಾಡಿ, ನಾವೂ ಒಂದು ಲಕ್ಷ ಕೋಟಿ ಅಷ್ಟು ವೆಲ್ಫೇರ್ ಕಿಟ್ಸ್ ಕೊಡ್ತಾ ಒದ್ದೀವಿ. 54 ಸಾವಿರ ಕೋಟಿ ರೂಪಾಯಿ ಇರಿಗೇಷನ್ ಹೋಗ್ತಾ ಇದೆ, ಗ್ಯಾರಂಟಿಗೆ ಹೋಗ್ತಾ ಇದೆ. 19 ಸಾವಿರ ಕೋಟಿ ರೂಪಾಯಿ ಪವರ್ ಗೆ ಹೋಗ್ತಾ ಇದೆ. ರೈತರಿಗೆ ಪವರ್ ಕೊಡ್ತಾ ಇದ್ದೀವಿ. ಬೇರೆ ಎಲ್ಲಾ ಕಡೆ ಯೋಜನೆಗಳು ಇದಾವೆ. ಎಲ್ಲಾ ಯೋಜನೆಗಳನ್ನ ಸೇರಿದರೆ ಒಂದು ಲಕ್ಷ ಕೋಟಿ ರೂಪಾಯಿ ಕೊಡ್ತಾ ಇದ್ದೀವಿ. ಅದು ಯಾರಿಗೆ ಜನರ ಅಭಿವೃದ್ಧಿಗೆ ಅಲ್ವಾ, ಕ್ಷೇತ್ರದ ಅಭಿವೃದ್ಧಿಗೆ ಅಲ್ವಾ ಎಂದು ಡಿಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment