ಸುದ್ದಿಒನ್, ಚಿತ್ರದುರ್ಗ, ಜೂನ್. 23 : ನಗರದ ಜಯಲಕ್ಷ್ಮೀ ಬಡಾವಣೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತವಾದ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೋಟೆ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಬೀನಾಭಾನು, ಅನ್ನುಬಾಷಾ ಮತ್ತು ತಿಪ್ಪೇಸ್ವಾಮಿ ಬಂಧಿತರು. ಇವರು ಜಯಲಕ್ಷ್ಮೀ ಬಡಾವಣೆಯ ವೀರಭದ್ರಸ್ವಾಮಿ ರಸ್ತೆಯಲ್ಲಿನ ಮುಜಾಫರ್ ಎಂಬುವವರ ಬಾಡಿಗೆ ಮನೆಯಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಭಾನುವಾರ ಸಂಜೆ 5.30 ರ ವೇಳೆಗೆ ಎಸ್.ಪಿ. ರಂಜಿತ್‌ಕುಮಾರ್ ಬಂಡಾರು, ಎ.ಎಸ್.ಪಿ. ಎಸ್.ಜೆ ಕುಮಾರಸ್ವಾಮಿ ನೇತೃತ್ವದಲ್ಲಿ ಡಿ.ವೈ.ಎಸ್.ಪಿ. ದಿನಕರ್ ಪಿ.ಕೆ, ಸಿ.ಇ.ಎನ್. ಠಾಣೆಯ ಡಿ.ವೈ.ಎಸ್.ಪಿ ಉಮೇಶ್ ಈಶ್ವರ್‌ನಾಯ್ಕ್ ಡಿ.ವೈ.ಎಸ್.ಪಿ, ಇವರ ಮಾರ್ಗದರ್ಶನದಲ್ಲಿ, ಕೋಟೆ ಠಾಣೆಯ ಪಿ.ಐ. ಪ್ರಕಾಶ ಗೌಡ ಪಾಟೀಲ್, ಪಿಎಸ್‌ಐ
ಬಿ.ರುಕ್ಕಮ್ಮ ಮತ್ತು ಸಿಬ್ಬಂದಿಯವರ ತಂಡ ಭಾನುವಾರ ಸಂಜೆ 5.30 ರ ವೇಳೆಗೆ ಜಯಲಕ್ಷ್ಮೀ ಬಡಾವಣೆಯಲ್ಲಿರುವ ಮುಜಾಫರ್ ಎಂಬುವವರ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿ ಅಮಾಯಕ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಬೀನಾಭಾನು, ಅನ್ನುಬಾಷಾ ಮತ್ತು ತಿಪ್ಪೇಸ್ವಾಮಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಅನ್ನುಬಾಷರವರಿಗೆ ಸೇರಿದ ಒಂದು ಕಾರು ಮತ್ತು 03 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದು. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು ವೇಶ್ಯಾವಾಟಿಕೆಯ ಬಗ್ಗೆ ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿರುತ್ತಾರೆ.




