ದಾವಣಗೆರೆ – ಚಿತ್ರದುರ್ಗ ರೈತರಲ್ಲಿ ಸಂತಸ : ಏನದು ಗೊತ್ತಾ..?

suddionenews
1 Min Read

ಚಿತ್ರದುರ್ಗ; ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ಮಳೆ ಚೆನ್ನಾಗಿ ಬಂದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಕಳೆದ ಬಾರಿ ಉತ್ತಮ ಮಳೆಯಾಗಿದೆ. ಈ ಬಾರಿಯೂ ಉತ್ತಮ ಮಳೆಯಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಯಾಕಂದ್ರೆ ಈ ಬಾರಿ ಅವಧಿಗೂ ಮುನ್ನವೇ ಮುಂಗಾರು ಶುರುವಾಗಿದೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗಲಿದೆ, ಬೆಳೆಯೂ ಆಗಲಿದೆ ಎನ್ನಲಾಗಿದೆ. ಇದರ ನಡುವೆಯೇ ದಾವಣಗೆರೆ ಹಾಗೂ ಚಿತ್ತದುರ್ಗ ರೈತರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದುವೇ ಭದ್ರಾ ಜಲಾಶಯದಿಂದ.

ಹೌದು, ಭದ್ರ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದ್ದು, ಗುರುವಾರ ಮುಂಜಾನೆಗೆ ಅಂದ್ರೆ ಶುಕ್ರವಾರಕ್ಕೆ 19,270 ಕ್ಯೂಸೆಕ್ ನೀರಿನ ಮಟ್ಟ ಮುಟ್ಟಿದೆ. ಇದು ದಾವಣಗೆರೆ- ಚಿತ್ರದುರ್ಗ ಅವಳಿ ನಗರ್ ರೈತರ ಸಂತಸಕ್ಕೆ‌ಕಾರಣವಾಗಿದೆ. ಕಳೆದ 20 ದಿನಗಳಿಂದ ಸುರಿದ ಮಳೆಗೆ 10 ಅಡಿ ನೀರು ಶೇಖರಣೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ದಾವಣಗೆರೆಯಲ್ಲಿ ತೋಟಗಾರಿಕೆ ಕೃಷಿ ಹೆಚ್ಚು. ಅಡಿಕೆ ಬೆಳೆಗಾರರು ಹೆಚ್ಚಾಗಿದ್ದಾರೆ. ಅದರಲ್ಲೂ ಭದ್ರಾ ಡ್ಯಾಂ ನೀರನ್ನೇ ನಂಬಿ ಕೃಷಿ ಮಾಡುವವರ ಸಂಖ್ಯೆ ಜಾಸ್ತಿ ಇದೆ. ಅಡಿಕೆ ಬೆಳೆಗೆ ನೀರು ಕೂಡ ಹೆಚ್ಚಾಗಿ ಬೇಕಾಗುತ್ತದೆ. ಹೀಗಾಗಿ ಭದ್ರಾ ಡ್ಯಾಂ ನಲ್ಲಿ ನೀರು ಎಷ್ಟೇ ಸಂಗ್ರಹವಾದರೂ ಕೂಡ ರೈತರಿಗೆ ಸಂತಸ ಹೆಚ್ಚಾಗಿರುತ್ತದೆ. ಅಡಿಕೆ ಫಸಲು ಉತ್ತಮವಾಗಿ ಬಂದರೆ, ಬೆಲೆಯೂ ಹೆಚ್ಚಾಗುವ ನಿರೀಕ್ಷೆ ರೈತರದ್ದು. ಭದ್ರಾ ಜಲಾಶಯ ಕೇವಲ ಕೃಷಿಗಾಗಿ ಮಾತ್ರವಲ್ಲ ಸುತ್ತ ಮುತ್ತ ಹಲವು ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿದೆ.

Share This Article
Leave a Comment

Leave a Reply

Your email address will not be published. Required fields are marked *