Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಮಾನ ದುರಂತದ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು..?

---Advertisement---

ಹುಬ್ಬಳ್ಳಿ; ನಿನ್ನೆ ನಡೆದ ವಿಮಾನ ದುರಂತಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಒಂದೇ ಬಾರಿಗೆ 241 ಮಂದಿ ಜೀವ ಕಳೆದುಕೊಂಡಿರುವುದನ್ನು ಕೇಳೋದಕ್ಕೇನೆ ದುಃಖವಾಗುತ್ತದೆ. ಯಾರನ್ನೋ ನೋಡುವುದಕ್ಕೆಂದು, ಇನ್ನ್ಯಾವುದೋ ಕಾರ್ಯಕ್ರಮದ ನಿಮಿತ್ತ ಪ್ರಯಾಣ ಮಾಡುತ್ತಿದ್ದವರು ಐದೇ ನಿಮಿಷದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದಕ್ಕೆ ಇಡೀ ದೇಶವೆ ಸಂತಾಪ ಸೂಚಿಸಿದೆ. ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಾಪ ಸೂಚಿಸಿದ್ದಾರೆ.

ನನಗಿರುವ ಮಾಹಿತಿ ಪ್ರಕಾರ ಎರಡು ಇಂಜಿನ್ ಗಳು ಸೋಜ್ ಆಗಿರುವಂತದ್ದು, ನಂಗೆ ಅದರ ಬಗ್ಗೆ ನಾಲೆಡ್ಜ್ ಇದೆ. ಬಹುತೇಕ 10 ಲಕ್ಷ 20 ಲಕ್ಷ ವಿಮಾನಗಳಲ್ಲಿ ಇದಾಗಿದ್ಯಾ ಎಂಬುದು ನನಗೆ ಗೊತ್ತಿಲ್ಲ. ಹೊಸ ವಿಮಾನವೇ ಅದು. ಆದರೆ ಆ ವಿಮಾನ ಯಾಕೆ ಪತನವಾಯ್ತು ಅನ್ನೋದೆ ಅರ್ಥ ಆಗ್ತಿಲ್ಲ. ಆ ಚರ್ಚೆಗಿಂತ ಆಗಿರುವ ಘಟನೆ ದುರಂತ. ಸುಮಾರು 241 ಮಂದಿ ಏನು ಜೀವನ ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ವಿಮಾನ ದುರಂತ ನಡೆದ ಸ್ಥಳಗಳಲ್ಲಿ ಮೃತದೇಹಗಳ ಗುರುತು ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಪ್ರಯಾಣಿಕರ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ. ಹೀಗಿರುವಾಗ ದೇಹ ಯಾರದ್ದು ಎಂಬುದನ್ನು ಕಂಡು ಹಿಡಿಯುವುದೇ ಸಾಹಸದ ಕೆಲಸವಾಗಿದೆ‌. ಬೆಳಗಾವಿ ಮೂಲದ ಕುಟುಂಬ ಕೂಡ ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಮಕ್ಕಳೊಂದಿಗೆ ದಂಪತಿಯೂ ದುರಂತ ಅಂತ್ಯ ಕಂಡಿದೆ. ಮೃತರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಎಲ್ಲರ ಮನೆಗಳಲ್ಲಿ ನೀರವ ಮೌನವಿದೆ. ತನ್ನವರನ್ನ ಕಳೆದುಕೊಂಡು ಗುರುತೇ ಸಿಗದ ದೇಹಗಳಿಗಾಗಿ ಕಾಯುತ್ತಾ ಕೂತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment