Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

BJP, JDS ಡೆಡ್ ಬಾಡಿ ಮೇಲೆ ರಾಜಕೀಯ ಮಾಡೋದು..!

---Advertisement---

ಬೆಂಗಳೂರು; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿನ್ನೆ ನಡೆಯಬಾರದಾ ದುರ್ಘಟನೆ ನಡೆದಿದೆ. ಅದರಿಂದ 11 ಜನ ಸಾವನ್ನಪ್ಪಿದ್ದಾರೆ. ಎಲ್ಲೆಲ್ಲಿಂದನೋ ಬಂದು ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಅವರ ಕುಟುಂಬಸ್ಥರು ಕೊರಗುತ್ತಿದ್ದಾರೆ. ಈ ಸಂಬಂಧ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ಮೇಲೆ ಹೌಹಾರಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಿರುಗೇಟು ನೀಡಿದ್ದು, ಎರಡು ಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡೋದೆ ಹೆಚ್ಚು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡರ್ಟಿ ಪಾಲಿಟಿಕ್ಸ್, ಬಿಜೆಪಿ, ಜೆಡಿಎಸ್ ಯಾವತ್ತಿದ್ರೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಕೆಎಸ್ಸಿಎಗೆ ಹೋಗುವ ಪ್ಲ್ಅನ್ ನನಗಿರಲಿಲ್ಲ. ಅವರು ಆಹ್ವಾನ ನೀಡಿದರೂ ಹೋಗೋಕೆ ಇಷ್ಟ ಇರಲಿಲ್ಲ. ಮ್ಯಾನೇಜ್ಮೆಂಟ್ ಅವರನ್ನು ನನ್ನ ಗಾಡಿಯಲ್ಲಿ ಕೂರಿಸೊಕೊಂಡು ಹೋಗಬೇಕಿತ್ತು. ತಕ್ಷಣ ಅವರ ಹತ್ತಿರ ಮಾತನಾಡಿ, ಅವರಿಗೆ ಹೇಳಿ ತಕ್ಷಣ 10 ನಿಮಿಷದಲ್ಲಿ ಕಾರ್ಯಕ್ರಮ ನಿಲ್ಲಿಸೋಕೆ ಹೇಳಿದೆ.

ಇದಕ್ಕೆಲ್ಲ ಅವರು ಒಪ್ಪಿಕೊಂಡರು. ಸ್ಟೇಡಿಯಂ ಹೋಗುವವರೆಗೂ ಹಿಂಗಾಗಿರುವುದು ನನಗೆ ಗೊತ್ತೇ ಇಲ್ಲ. ಫೋನ್ ಗಳು ಜ್ಯಾಮ್ ಆಗಿದ್ದವು. ಮಾಧ್ಯಮದವರೇ ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು. ಆಗಿರುವ ಘಟನೆ ಕುರಿತು ಈಗ ರಾಜಕಾರಣ ಮಾತನಾಡುವುದು ಬೇಡ. ಕುಮಾರಸ್ವಾಮಿ ಹೇಳಿದಂಗೆ ಅದಕ್ಕೆ ಉತ್ತರ ಆಮೇಲೆ ಕೊಡ್ತೀನಿ. ನನ್ನ ನನ್ನ ಮನೆ ಮುಂದೆ ರಾಜಕುಮಾರ್​​ದ್ದು ಆಗಿದ್ದಾಗ ಆವತ್ತು ಏನಾಯಿತು?. ಡೆಲ್ಲಿ ಏನಾಗಿತ್ತು?. ಇದರ ಬಗ್ಗೆ ರಾಜಕೀಯ ಮಾತನಾಡೋಕೆ ನಾನು ಹೋಗಲ್ಲ. ಕೆಟ್ಟ ರಾಜಕೀಯ. ಬಿಜೆಪಿ, ಜೆಡಿಎಸ್​ ಯಾವಾಗಲೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಇದು ಅವರ ರಾಜಕೀಯ ಅಜೆಂಡಾ ಆಗಿದೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment