ರಾಮನಗರ; ಆರ್ಸಿಬಿ ಈ ಬಾರಿ ಕಪ್ ಗೆದ್ದಿದ್ದು ಎಷ್ಟು ಸಂತಸವಾಗಿದೆ ಅಂದ್ರೆ ಅದನ್ನೆಲ್ಲ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ರಾಜಕಾರಣಿಗಳಲ್ಲೂ ಕ್ರಿಕೆಟ್ ಅಂದ್ರೆ ಕ್ರೇಜ್ ಇರೋರು ಇದಾರೆ. ಅದರಲ್ಲೂ ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರೇ ಕ್ರಿಕೆಟ್ ಅಭಿಮಾನಿಗಳಾಗಿದ್ದಾರೆ. ನಿನ್ನೆ ನಡೆದ ನೆಕ್ ಟು ನೆಕ್ ಮ್ಯಾಚ್ ಅನ್ನು ಇಬ್ಬರು ಸಮಯ ಸಿಕ್ಕಲ್ಲಿ ವೀಕ್ಷಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿಯೇ ಮ್ಯಾಚ್ ನೋಡಿದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮನೆಯಲ್ಲಿ ಮ್ಯಾಚ್ ಎಂಜಾಯ್ ಮಾಡಿದ್ದಾರೆ. ಇದೀಗಮ್ಯಾಚ್ ಗೆದ್ದ ಖುಷಿಯಲ್ಲಿ, ಕಪ್ ಬಂದ ಸಂತಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೊಹ್ಲಿಯನ್ನ ಹಾಡಿ ಹೊಗಳಿದ್ದಾರೆ. ಇಡೀ ತಂಡವನ್ನು ಪ್ರೋತ್ಸಾಹಿಸಿದ್ದಾರೆ.
ಎಲ್ಲರಿಗೂ ಒಂದು ಅವಕಾಶವಿದೆ. ಡಿವಿಜಿ ಹೇಳ್ತಾರೆ ನಾನೇನು ಹುಲ್ಲುಕಡ್ಡಿ ಎಂದು ತಿಳಿಯಬೇಡ. ಈ ದೇಗುಲದ ಜಗತ್ತೊಳಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿನಗೆ ಅವಕಾಶವಿದೆ. ಚಿಕ್ಕವನಾಗಲಿ, ದೊಡ್ಡವನಾಗಲಿ ಅಂತ. ಸೋ 18 ವರ್ಷದಿಂದ ನಮ್ಮ ಆರ್ಸಿಬಿಯವರು ಬಹಳ ಪ್ರಯತ್ನ ಮಾಡ್ತಾ ಇದ್ರು. ವಿರಾಟ್ ಕೊಹ್ಲಿ ಅವರು ಎಷ್ಟೇ ಕಷ್ಟ ಆದರೂ ನಮ್ಮ ಟೀಂ ಬಿಡದೆ, ಬೆಂಗಳೂರು ಟೀಂ ಬಿಡದೆ ಕಷ್ಟ – ಸುಖ ಎರಡರಲ್ಲೂ ಅವರು ಉಳಿದುಕೊಂಡಿದ್ದರು. ಅದು ಬಹಳ ವಿಶೇಷವಾದಂತ ವಿಚಾರ.
ಭಾವುಕ ಯಾಕೆ ಆಗ್ತೀವಿ ಅಂದ್ರೆ ದುಃಖಕ್ಕೂ ಬರುತ್ತೆ, ಸಂತೋಷಕ್ಕೂ ಬರುತ್ತೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಫಲಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಇಡೀ ಟೀಂನಲ್ಲಿ ಒಗ್ಗಟ್ಟಿದೆ. ಈ ಬಾರಿ ಕಪ್ ಗೆದ್ದಿರೋದು ಎಲ್ಲರಿಗೂ ಖುಷಿ ತಂದಿದೆ ಎಂದು ಆರ್ಸಿಬಿ ತಂಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











