Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುತೂಹಲ ಹೆಚ್ಚಿಸಿದ ಫೈನಲ್ ಪಂದ್ಯ : ಕಾರಿನಲ್ಲೇ ಕೂತು ಪಂದ್ಯ ವೀಕ್ಷಿಸಿದ ಸಿಎಂ

---Advertisement---

ಬೆಂಗಳೂರು; ಇವತ್ತು ಎಲ್ಲರ ಎದೆಯಲ್ಲಿ ಕೊಂಚ ಡಬ್ ಡಬ್ ಅನ್ನೋ ಸೌಂಡು ಸ್ವಲ್ಪ ಜೋರಾಗಿಯೇ ಬಡಿದುಕೊಳ್ಳುತ್ತಾ ಇದೆ. 18 ವರ್ಷಗಳ ಕನಸು ನನಸಾಗುವ ನಿರೀಕ್ಷೆಯಲ್ಲಿ ಆರ್ಸಿಬಿ ಫ್ಯಾನ್ಸ್ ಇದ್ದಾರೆ. ಆದರೆ ಪಂಜಾಬ್ ಗೆ ಕೇವಲ 191 ರನ್ ಗಳ ಟಾರ್ಗೆಟ್ ಅನ್ನ ನೀಡಿದೆ. ಕ್ರಿಕೆಟ್ ನಲ್ಲಿ ಹೇಗೆ ಅಂತ ಕೆಲವೊಂದು ಸಲ ಹೇಳೋದಕ್ಕೆ ಆಗಲ್ಲ. ಆರ್ಸಿಬಿ ಗೆಲ್ಲಲಿ ಅಂತಾನೇ ಅಭಿಮಾನಿಗಳು ಈಗಲೂ ಪ್ರಾರ್ಥನೆ ಮಾಡ್ತಿದ್ದಾರೆ. ಅದೇ ಟೆನ್ಶನ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಮ್ಯಾಚ್ ನೋಡ್ತಾ ಇದ್ದಾರೆ. ಕಾರಿನಲ್ಲಿಯೇ ಕೂತು ಮ್ಯಾಚ್ ಅನ್ನು ನೋಡಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಅವರು ಗದಗ ಜಿಲ್ಲೆಯ ಪ್ರವಾಸದಲ್ಲಿದ್ದರು. ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದವರು, ಕಾರಿನಲ್ಲಿ ಮನೆಗೆ ಹೊರಟರು. ಇದೆ ವೇಳೆ ಮ್ಯಾಚ್ ಶುರುವಾಗಿದ್ದು ಗಮನಕ್ಕೆ ಬಂದ ಕೂಡಲೇ ಕಾರಿನಲ್ಲಿಯೇ ಕೂತು ಮ್ಯಾಚ್ ನೋಡಿದ್ದಾರೆ. ಟ್ಯಾಬ್ ನಲ್ಲಿ ಐಪಿಎಲ್ ಪಂದ್ಯ ವೀಕ್ಷಣೆ ಮಾಡುವ ಮೂಲಕ, ಅವರಿಗೂ ಕುತೂಹಲವಿರುವುದು ಈ ಫೋಟೋ ಮೂಲಕ ಅರ್ಥವಾದಂತೆ ಆಗಿದೆ.

ಹೇಳಿ ಕೇಳಿ ಎಲ್ಲರಿಗೂ ಗೊತ್ತಿರುವಂತೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಕ್ರಿಕೆಟ್ ಅಭಿಮಾನಿ. ಬೆಂಗಳೂರಿನಲ್ಲಿ ಮ್ಯಾಚ್ ನಡೆದಾಗ ಸಾಕಷ್ಟು ಸಲ, ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕೂತು ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮನೆಯಲ್ಲಿ ಕೂತು ಮ್ಯಾಚ್ ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಆರ್ಸಿಬಿ ಅಭಿಮಾನಿಗಳು ದೊಡ್ಡ ದೊಡ್ಡ ಪರದೆಯನ್ನ ಹಾಕಿಕೊಂಡು ಮ್ಯಾಚ್ ನೋಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...