Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕನ್ನಡ ತಮಿಳಿನಿಂದ ಬಂದಿದ್ದು : ಕಮಲ್ ಹಾಸನ್ ಮಾತಿಗೆ ಕನ್ನಡಿಗರು ಕೆಂಡಾಮಂಡಲ..!

---Advertisement---

ಬೆಂಗಳೂರು; ಸ್ಟಾರ್ ನಟರು ಆಗಾಗ ಭಾಷೆಯ ವಿಚಾರಕ್ಕೇನೆ ಸುದ್ದಿಯಾಗುತ್ತಾ ಇರುತ್ತಾರೆ. ಇದೀಗ ಕಮಲ್ ಹಾಸನ್ ಅಂತದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕನ್ನಡ ತಮಿಳಿನಿಂದ ಹುಟ್ಟಿದ್ದು ಅಂತ ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ನಿನ್ನೆ ನಡೆದ ಸಿನಿಮಾದ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಾರೆ. ಅದು ಶಿವಣ್ಣನ ಎದುರಿಗೆ ಕನ್ನಡದ ಬಗ್ಗೆ ಮಾತನಾಡಿದ್ದಾರೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಕಮಲ್ ಹಾಸನ್ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕಮಲ್ ಹಾಸನ್ ಮುಂದಿನ ಸಿನಿಮಾದ ಪ್ರಿರಿಲೀಸ್ ಇವೆಂಟ್ ನಲ್ಲಿ ಈ ಘಟನೆ ನಡೆದಿದೆ. ಶಿವಣ್ಣ ಕೂಡ ನಿನ್ನೆ ಈ ಕಾರ್ಯಕ್ರಮದಲ್ಲಿ ಭಾವಿಯಾಗಿದ್ದರು. ಈ ವೇಳೆ ಡಾ.ರಾಜ್‍ಕುಮಾರ್ ಅವರ ಮೇಲಿರುವ ಗೌರವದ ಬಗ್ಗೆಯೂ ಮಾತನಾಡಿದ್ದಾರೆ. ಬಳಿಕ ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು ಅಂತ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಕಮಲ್ ಹಾಸನ್ ಹೇಳಿದ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕಮಲ್ ಹಾಸನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿರೋದಲ್ಲ. ಕನ್ನಡ ಮೊದಲು. ಯಾಕಂದ್ರೆ ತಮಿಳಿಗಿಂತ ಪುರಾತನವಾದದ್ದು ನಮ್ಮ ಕನ್ನಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಾ ಇದೆ. ಕಮಲ್ ಹಾಸನ್ ಗೆ ಕನ್ನಡದ ಜನತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ಅದೇ ಸಿನಿಮಾದ ಪ್ರಮೋಷನ್ ಗಾಗಿ ಕಮಲ್ ಹಾಸನ್ ಬೆಂಗಳೂರಿಗೂ ಬಂದಿಳಿದಿದ್ದಾರೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ತಮ್ಮ ಸಿನಿಮಾ ಪ್ರಮೋಷನ್ ಮಾಡ್ತಾ ಇದಾರೆ. ಇದರ ನಡುವೆ ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಕನ್ನಡದ ತಂಟೆಗೆ ಯಾರೇ ಬಂದ್ರು ಕನ್ನಡಿಗರು ಸುಮ್ಮನೆ ಬಿಡುವ ಮಾತೇ ಇಲ್ಲ. ಅದನ್ನ ಈಗಾಗಲೇ ಸಾಕಷ್ಟು ಸಲ ಪ್ರೂವ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...