ನವದೆಹಲಿ: ಗುಂಪು ಹತ್ಯೆಗಳ ಪಿತಾಮಹ ರಾಜೀವ್ ಗಾಂಧಿ ಎಂದು ಬಿಜೆಪಿ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಅದೆಷ್ಟೋ ಹತ್ಯಾಕಾಂಡಗಳಾಗಿವೆ. ಇದು ನೆಹರೂ-ಗಾಂಧಿ ಪರಿವಾರದ ಮೇಲ್ವಿಚಾರಣೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಒಂದು ಸಣ್ಣ ಪಟ್ಟಿ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಬರೆದಿದ್ದಾರೆ.
ಇಂದಿರಾ ಗಾಂಧಿಯವರ ಹತ್ಯೆಯ ನಂತರ ಸಿಖ್ಖರ “ಹತ್ಯಾಕಾಂಡ”ವನ್ನು ಕಾಂಗ್ರೆಸ್ ಸಮರ್ಥಿಸುತ್ತಿದೆ ಎಂದು ಆರೋಪಿಸಿದರು. ಅವರು ಆ ವರ್ಷ ರಾಜೀವ್ ಗಾಂಧಿಯವರ ಭಾಷಣದ ಆಯ್ದ ಭಾಗವಾದ ‘ಜಬ್ ಭೀ ಬಡಾ ಪೆಡ್ ಗಿರ್ತಾ ಹೈ, ಧರ್ತಿ ಹಿಲ್ತಿ ಹೈ’ ಅಥವಾ ‘ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.
2014ರ ಮೊದಲು ಲೀಂಚಿಂಗ್ ಎಂಬ ಪದವನ್ನ ಪ್ರಾಯೋಗಿಕವಾಗಿ ನಾವೂ ಯಾರೂ ಕೇಳಿರಲಿಲ್ಲ ಧನ್ಯವಾದಗಳು ಮೋದಿಜೀ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಗೆ ಇದೀಗ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.