ಬೆಂಗಳೂರು; ನಾಳೆ ಅಂದ್ರೆ ಮೇ 18ರಂದು ಹುಟ್ಟುಹಬ್ಬವಿದೆ. ಆದರೆ ಒಂದು ದಿನ ಮೊದಲೇ ದೊಡ್ಡ ಗೌಡರ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಗಿದೆ. ಏರ್ ಇಂಡಿಯಾ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು, ಕೇಕ್ ಕಟ್ ಮಾಡಿಸಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿ ದೇವೇಗೌಡರಿಗೆ ಶುಭಕೋರಿದ್ದಾರೆ.
https://x.com/JanataDal_S/status/1923614466979266995?t=-0Hmf-4SSFHyMevhKTHdjQ&s=19
‘ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ
ಶ್ರೀ @H_D_Devegowda ಅವರ ಜನ್ಮದಿನವನ್ನು ಏರ್ ಇಂಡಿಯಾ ವಿಶೇಷವಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಿತು. ದೆಹಲಿ – ಬೆಂಗಳೂರು ವಿಮಾನ ಪ್ರಯಾಣದ ವೇಳೆ 35 ಸಾವಿರ ಅಡಿ ಎತ್ತರದಲ್ಲಿ ಆಚರಿಸಿ ಏರ್ ಇಂಡಿಯಾ ಪರವಾಗಿ ಸಿಬ್ಬಂದಿಗಳು ದೇವೇಗೌಡರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು’ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ನಾಡು ಕಂಡ ಧೀಮಂತ ನಾಯಕರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕೂಡ ಒಬ್ಬರು. ನಾಳೆ ಅಂದ್ರೆ ಮೇ 18ಕ್ಕೆ 92ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸದಾ ಕಾಲ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈಗಲೂ ಯೋಗದ ಮೂಲಕ ಆರೊಇಗ್ಯವಾಗಿ ಇದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನಾಳೆ ತಿರಪುತಿ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ. ತಮ್ಮ ಧರ್ಮಪತ್ನಿ ಚೆನ್ನಮ್ಮ ಅವರ ಜೊತೆಗೆ ದೇವೇಗೌಡರು ತಿರಪತಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೊತೆಗೆ ಅವರೊಟ್ಟಿಗೆ 20 ಜನ ಸದಸ್ಯರು ನಾಳೆ ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ. ಅವರ ಬೆಂಬಲಿಗರು, ಅಭಿಮಾನಿಗಳು ನೂರಾರು ವರ್ಷ ನೆಮ್ಮದಿ, ಆರೋಗ್ಯದಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಶುಭಾಶಯಗಳನ್ನು ಕೋರಲು ಸಿದ್ಧತೆ ನಡೆಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















