ಬೆಂಗಳೂರು; ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಹಲವು ಇಲಾಖೆಗ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ 7 ನಗರದಲ್ಲಿ 40 ಕಡೆಗಳಲ್ಲಿ 150ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ವಿಜಯಪುರ, ಯಾದಗಿರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನ 12 ಕಡೆ, ಬೆಂಗಳೂರು ಗ್ರಾಮಾಂತರದಲ್ಲಿ 8 ಕಡೆ, ಯಾದಗಿರಿ 5, ವಿಜಯಪುರ 4, ಮಂಗಳೂರು 4 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಹಲವು ಪ್ರಮುಖ ದಾಖಲೆಗಳನ್ನ ಈಗಲೂ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಕೇಳಿ ಬಂದ ಹಿನ್ನೆಲೆ ಅವರವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಹಾಗಾದ್ರೆ ಯಾವೆಲ್ಲಾ ಅಧಿಕಾರಿಗಳ ಮೇಲೆ ದಾಳಿಯಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ನಿರ್ಮಿತ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ತುಮಕೂರಿನ ರಾಜಶೇಖರ್, ದಕ್ಷಿಣ ಕನ್ನಡ ಮಂಗಳೂರಿನ ಸರ್ವೇ ಮೇಲ್ವಿಚಾರಕರಾಗಿರುವ ಮಂಜುನಾಥ್, ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿಯ ರೇಣುಕಾ ಸಾತರ್ಲೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರಾದ ಮುರಳಿ ಟಿವಿ, ಬೆಂಗಳೂರಿನ ಕಾನೂನು ಮಾಪನಶಾಸ್ತ್ರ ವಿಭಾಗದ ಇನ್ಸ್‌ಪೆಕ್ಟರ್ ಹೆಚ್.ಆರ್.ನಟರಾಜ್ , ಬೆಂಗಳೂರು ಗ್ರಾಮಾಂತರದ ಹಿಸಕೋಟೆ ತಾಲೂಕಿನ ಕಚೇರಿಯ SDA ಅನಂತ್ ಕುಮಾರ್, ಯಾದಗಿರಿಯ ಶಹಾಪುರ ತಾಲೂಕಿನ ಉಮಾಕಾಂತ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ.


