ಹಿಂದು ನಾಯಕನಾಗಿದ್ದರೆ ಕಬಾಬ್, ಚಿಕನ್ ತಿಂತಾ ಇರಲಿಲ್ಲ : ರೇಣುಕಾಚಾರ್ಯ ಹೌಹಾರಿದ್ದು ಯಾರ ಮೇಲೆ..?

suddionenews
1 Min Read

ಬೀದರ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಬಿಜೆಪಿ ಪಕ್ಷದಿಂದಾನೇ ಅದಾಗಲೇ ಉಚ್ಛಾಟನೆ ಮಾಡಿದೆ. ಅದರಲ್ಲೂ ಆರು ವರ್ಷಗಳ ಕಾಲ. ಆದರೂ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಟಾರ್ಗೆಟ್ ಮಾಡಿರುವುದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರರನ್ನ. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಯತ್ನಾಳ್ ಅವರಿಗೆ ಟಾಂಟ್ ಕೊಡುವುದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು. ಇದೀಗ ಇಂದು ಕೂಡ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ. ನಕಲಿ ಹಿಂದು ಆತ ಎಂದು ಕೂಗಿದ್ದಾರೆ. ಕಬಾಬ್, ಚಿಕನ್ ತಿಂದ ಬಗ್ಗೆ ಉಲ್ಲೇಖಿಸಿದ್ದಾರೆ.

ಅಯ್ತಪ್ಪ ಸ್ವಯಂ ಘೋಷಿತ ಹಿಂದೂ ನಾಯಕ. ನೀನು ಹಿಂದೂ ನಾಯಕ ಆಗಿದ್ರೆ ಕಬಾಬ್, ಚಿಕನ್ ಯಾಕ್ ತಿಂದೆ. ಇಫ್ತಿಯಾರ್ ಕೂಟ ಯಾಕೆ ಆಚರಿಸಿದೆ. ಟಿಪ್ಪು ಅವತಾರ ಯಾಕೆ ತಾಳಿದಿಯಪ್ಪ. ಟಿಪ್ಪು ಅವತಾರ ತಾಳಲಿಲ್ಲವಾ..? ಟೋಪಿ ಹಾಕಿಕೊಳ್ಳಲಿಲ್ವಾ..? ನಕಲಿ ಹಿಂದು. ಇದನ್ನ ಬಿಟ್ಟು ಬಿಡು, ನಿನ್ನ ಆಟಗಳನ್ನ ಬಿಟ್ಟು ಬಿಡು. ಭಾರತೀಯ ಜನತಾ ಪಾರ್ಟಿ ಸರ್ಕಾವಿದ್ದಾಗ ಹಿಂದೂಗಳ ರಕ್ಷಣೆ ಮಾಡಿದ್ದೀವಿ. ಹಂಗಾದ್ರೆ ಮೋದಿ ಅವರ ಸರ್ಕಾರ ಇಂದುಗಳ ರಕ್ಷಣೆ ಮಾಡಿಲ್ವಾ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಘ ಪರಿವಾರದಿಂದ ಬಂದವರು.

ನೀನು ಮೊದಲು ನಕಲಿ ಹಿಂದುತ್ವ ಬಿಟ್ಟು ಬಿಡು. ನೀನು ಏನು ಮಾತಾಡ್ತೀಯಾ. ನಾಲಿಗೆಗು ಮೆದುಳಿಗೂ ಲಿಂಕೇ ಇಲ್ಲ. ಹಾಗಾಗಿ ಆವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಕ್ಕೆ ಇಚ್ಛೆ ಪಡಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks