Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜನಿವಾರ, ಮಾಂಗಲಗಯ ವಿಚಾರ ; ರೈಲ್ವೇ ಇಲಾಖೆಯಿಂದ ಮಹತ್ವದ ಆದೇಶ

---Advertisement---

ಬೆಂಗಳೂರು; ಇತ್ತೀಚೆಗಷ್ಟೇ ನಡೆದ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ, ಬೀದರ್, ಧಾರವಾಡದಲ್ಲಿ ಜನಿವಾರ ತೆಗೆಸಿ ಪರೀಕ್ಷೆಯನ್ನ ಬರೆಸಿದ್ದರು. ಈ ವಿಚಾರ ಎಲ್ಲೆಡೆ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರೈಲ್ವೆ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಾಳೆ ಪರೀಕ್ಷೆ ನಡೆಯಲಿದೆ. ಈಗಾಗಲೇ ಹಾಲ್ ಟಿಕೆಟ್ ಅಭ್ಯರ್ಥಿಗಳ ಕೈಸೇರಿದೆ. ಆ ಹಾಲ್ ಟಿಕೆಟ್ ನಲ್ಲಿ ಮಂಗಳ ಸೂತ್ರದ ನಿಷೇಧವನ್ನು ಹೇರಲಾಗಿತ್ತು. ಅಂದ್ರೆ ಪರೀಕ್ಷೆ ಬರೆಯಲು ಬರುವವರು ಮಂಗಳ ಸೂತ್ರ ಧರಿಸುವಂತಿಲ್ಲ ಎಂದು.

ಮೊದಲೇ ಹಿಂದುಗಳ ಧಾರ್ಮಿಕ ನಂಬಿಕೆ ಈ ಮಂಗಳ ಸೂತ್ರ. ಹಿರಿಯರು ಯಾವುದೇ ಸಮಯದಲ್ಲೂ ಮಂಗಳ ಸೂತ್ರವನ್ನ ಬಿಚ್ಚಿಡೋದಿಲ್ಲ. ಹೀಗಿರುವಾಗ ಮಂಗಳ ಸೂತ್ರದ ಬಗ್ಗೆ ಹಾಲ್ ಟಿಕೆಟ್ ನಲ್ಲಿ ಮೆನ್ಶನ್ ಮಾಡಿದ್ದದ್ದು, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯಾವಾಗ ರೈಲ್ವೆಯ ಈ ನಿರ್ಧಾರ ಸಿಕ್ಕಾಪಟ್ಟೆ ವೈರಲ್ ಆಯ್ತೋ ಇದೀಗ ರೈಲ್ವೆ ಇಲಾಖೆಯಿಂದ ಆದೇಶ ವಾಪಸ್ ಪಡೆಯಲಾಗಿದೆ.

ಈ ಸಂಬಂಧ ಮಾತನಾಡಿದ ವಿ.ಸೋಮಣ್ಣ, ಮಾಂಗಲ್ಯ, ಜನಿವಾರ ತೆಗೆಯಬೇಕು ಎಂಬ ಆದೇಶವನ್ನ ಬದಲಿಸಲಾಗಿದೆ. ಈ ಹಿಂದೆ ಇದ್ದ ಆದೇಶವನ್ನು ವಾಪಾಸ್ ಪಡೆಯಲಾಗಿದೆ. ದೇಶಾದ್ಯಂತ ನಾಳೆ ನಡೆಯುವ ಪರೀಕ್ಷೆಗೆ ಇದು ಅನ್ವಯವಾಗಲಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಜೊತೆಗೆ ಈ ಸಂಬಂಧ ಸುಧೀರ್ಘವಾದ ಚರ್ಚೆ ನಡೆಸಿದ್ದೇನೆ. ಪರೀಕ್ಷೆ ಬರೆಯಲು ಇದ್ದಂತ ಈ ನಿಬಂಧನೆಗಳು ಅನೇಕ ವರ್ಷದಿಂದಾನೂ ಇದ್ದವು. ಜನಿವಾರ ತೆಗೆಯದಂತೆ ಇಂದೇ ಆದೇಶವಾಗಲಿದೆ. ಸುಮಾರು ವರ್ಷದಿಂದ ಇದ್ದಂತ ಕಟ್ಟು ಪಾಡುಗಳನ್ನ ತೆಗೆದು ಹಾಕಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment