Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಐದು ವರ್ಷದ ಬಾಲಕಿಯ ಮೇಲೆ ಕ್ರೂರತೆ ಎಸಗಿದವ ಎನ್ಕೌಂಟರ್ ; ಪೊಲೀಸ್ ಕಮಿಷನರ್ ಹೇಳಿದ್ದೇನು..?

---Advertisement---

ಹುಬ್ಬಳ್ಳಿ; ಐದು ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ, ಆ ಮಗುವಿನ ಮೇಲೆ ಕ್ರೂರತೆ ತೋರಿ, ಕೊಂದ ಬುಹಾರ ಮೂಲದ ಪಾಪಿಗೆ ಸರಿಯಾದ ಶಿಕ್ಷೆಯಾಗಿದೆ. ಎನ್ಕೌಂಟರ್ ಮಾಡಿದ್ದು, ಈಗ ಆ ಆರೋಪಿಯೂ ಸತ್ತಿದ್ದಾನೆ. ಎನ್ಕೌಂಟರ್ ಮಾಡಿದ ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಆ ಬಗ್ಗೆ ಮಾತನಾಡಿದ್ದಾರೆ.

 

ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ಸ್ಥಳ ಏನಿದೆ ಒಲ್ಡ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇರುವಂಥದ್ದು. ರಾಯ್ನಾಳ್ ಬ್ರಿಡ್ಜ್ ಅಂಡರ್ ಪಾಸ್ ಬಳಿ ಇರುವಂಥದ್ದು. ನೀವೂ ಗಮನಿಸಿದರೆ ಇಲ್ಲಿ ಒಂದೆರಡು ಅಪಾರ್ಟ್ಮೆಂಟ್ ಗಳು ಇದಾವೆ. ಅವನನ್ನ ವಿಚಾರಣೆ ನಡೆಸಿದಾಗ ಈ ಅಪಾರ್ಟ್ಮೆಂಟ್ ಸುತ್ತಮುತ್ತ ಇರುವ ಬಿಲ್ಡಿಂಗ್ ನಲ್ಲಿ ವಾಸ ಇದ್ದೆ ಅಂತ ಹೇಳ್ತಾನೆ. ಆ ಕಾರಣಕ್ಕೆ ಈ ಬಿಲ್ಡಿಂಗ್ ಗಳಲ್ಲಿ ಏನಾದರೂ ಅವನ ಗುರುತು ಸಿಗಬಹುದು ಅಂತ ಕರೆದುಕೊಂಡು ಬಂದಿದ್ದೆವು. ಅಂದ್ರೆ ಆಧಾರ್ ಕಾರ್ಡ್, ಯಾವುದಾದರೂ ಐಡಿ ಕಾರ್ಡ್ ಗಳು.

ಆದರೆ ಆ ಸಂದರ್ಭದಲ್ಲಿ ಏಕಾಏಕಿ ತಪ್ಪಿಸಿಕೊಂಡು ಖಾಲಿ ಜಾಗ ಇರುವ ಕಡೆಗ ಓಡಿ ಹೋಗುವುದಕ್ಕೆ ಪ್ರಯತ್ನಿಸಿದ್ದಾನೆ. ಆಗ ನಮ್ಮ ಅಧಿಕಾರಿಗಳು ಏರ್ ಫೈಯರ್ ಮಾಡಿ ಹೆದರಿಸಿದ್ದಾರೆ. ಅದಕ್ಕು ನಿಲ್ಲದೆ ಓಡಿ ಹೋಗಿದ್ದಾನೆ. ಆಗ ಅವನ ಮೇಲೆ ಫೈಯರ್ ಮಾಡಿ, ವಶಕ್ಕೆ ಪಡೆದು ತಕ್ಷಣವೇ ಅವನನ್ನ ಆಸ್ಪತ್ರೆಗೂ ಶಿಫ್ಟ್ ಮಾಡಿದ್ದಾರೆ. ನಮ್ಮ ಸಬ್ ಇನ್ಸ್‌ಪೆಕ್ಟರ್ ಹಾಗೂ ಇನ್ಸ್‌ಪೆಕ್ಟರ್ ತಂಡ ಅವನಿಗೆ ಹೆಚ್ಚುವರಿ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದರು. ವಿಚಾರಣೆ ವೇಳೆ ಹೆಸರು, ಊರು ಅಷ್ಟೇ ಹೇಳಿದ್ದ. ಅವನ ಆಧಾರ್ ಕಾರ್ಡ್ ಏನಾದ್ರೂ ಸಿಗುತ್ತಾ ಎಂಬ ಕಾರಣಕ್ಕೆ ಆತನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಂತ ಸಂದರ್ಭದಲ್ಲಿ ಡೆತ್ ಅಂತ ಹೇಳಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...