Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುಂಗಾ ಭದ್ರಾ ಜಲಾಶಯದ ನೀರು ಮಲೀನ ; ಜಲಚರ ಪ್ರಾಣಿಗಳಿಗೂ ಕಂಟಕ.. ಜನರಿಗೂ ಆತಂಕ..!

---Advertisement---

ವಿಜಯನಗರ; ತುಂಗಾ ಭದ್ರಾ ಜಲಾಶಯದ ನೀರು ಸದ್ಯ ಮಲೀನವಾಗಿದೆ ಎಂಬ ಆತಂಕ ಆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ ಆ ಭಾಗದ ಜನರ ಜೀವನಾಡಿಯೇ ಈ ತುಂಗಾ ಭದ್ರ ಜಲಾಶಯವಾಗಿದೆ. ಹೀಗಿರುವಾಗ ಮಲೀನಗೊಂಡರೆ ಜನ ಜಾನುವಾರು ಏನಾಗಬೇಡ. ಬಿರು ಬೇಸಿಗೆ ಇರುವ ಕಾರಣ ಜಲಾಶಯದಲ್ಲಿ ನೀರಿನ ಮಟ್ಟವೂ ಕಡಿಮೆ ಇದೆ. ತುಂಗಾ ಭದ್ರ ಜಲಾಶಯವೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಕೃಷಿ ಭೂಮಿ ಹಾಗೂ ಜನ ಜಾನುವಾರುಗಳಿಗೆ ನೀರುಣಿಸುತ್ತಿದೆ.

ತುಂಗಾ ಭದ್ರ ಜಲಾಶಯಕ್ಕೆ ಈ ವರ್ಷ ಬರೋಬ್ಬರಿ 480 ಟಿಎಂಸಿ ನೀರು ಹರಿದು ಬಂದಿತ್ತು. ಆದರೆ 30 ಟಿಎಂಸಿ ನೀರುವ ಇರುವಷ್ಟು ಜಾಗದಲ್ಲಿ ಹೂಳು ತುಂಬಿದೆ. ಇದರ ಜೊತೆಗೆ ಪರ್ಯಾಯ ಜಲಾಶಯದ ಕನಸು ಕೂಡ ಈಡೇರಿಲ್ಲ. ಹೀಗಾಗಿ ನೀರಿನ ಸದ್ಬಳಕೆ ಸಾಧ್ಯವಾಗಿಲ್ಲ. ಈಗ ಬಳಕೆಗೆ ಇರುವುದು ಕೇವಲ 7 ಟಿಎಂಸಿ ನೀರು ಮಾತ್ರ. ಕಳೆದ ವರ್ಷವೂ ನೀರಿನ ಅಭಾವ ಉಂಟಾಗಿ ಜಲಚರ ಪ್ರಾಣಿಗಳ ಮಾರಣಹೋಮ ನಡೆದಿತ್ತು. ಈಗ ಬೇರೆ ತುಂಗ ಭದ್ರ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಜಲಾಶಯಕ್ಕೆ ಕಾರ್ಖಾನೆಗಳ ತ್ಯಾಜ್ಯ ಹಾಗೂ ನದಿ ಪಾತ್ರದ ನಗರಗಳ ತ್ಯಾಜ್ಯ ನೇರವಾಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ಆದ ಕಾರಣ ನೀರು ಮಲೀನವಾಗುತ್ತಿದೆ. ನೀರು ಮಲೀನವಾಗಿದೆ. ಇದರಿಂದ ಜಲಚರ ಪ್ರಾಣಿಗಳಿಗೆ ಉಸಿರು ಕಟ್ಟಿದ ವಾತಾವರಣ ಉಂಟಾಗುತ್ತದೆ. ತುಂಗಾಭದ್ರ ಜಲಾಶಯಕ್ಕೆ ತ್ಯಾಜ್ಯ ಹರಿದು ಬರುತ್ತಿರುವ ಬಗ್ಗೆ ಮೊದಲಿನಿಂದಾನೂ ದೂರುಗಳು ಇದಾವೆ. ಆದರೆ ಈ ವರ್ಷವೂ ಆ ಸಮಸ್ಯೆಯನ್ನು ಸಂಬಂಧಪಟ್ಟವರು ಬಗೆಹರಿಸುವ ತಂಟೆಗೆ ಹೋಗಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment