Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಹೆಚ್ಚಾಗ್ತಿದೆ ಬಿಸಿ ವಾತಾವರಣ ; ಚಿತ್ರದುರ್ಗ ಸೇರಿದಂತೆ ಎಲ್ಲೆಲ್ಲಿ ಹೆಚ್ಚು..?

---Advertisement---

ಬೆಂಗಳೂರು, ಮಾರ್ಚ್. 19 :  ಬಿಸಿಲು ಹೇಗಿದೆ ಅಂದ್ರೆ ಹೊರಗೆ ಹೋಗುವುದಕ್ಕೂ ಭಯ ಪಡುವಷ್ಟು ಇದೆ. ನೆತ್ತಿ ಸುಡುತ್ತಿದೆ, ಗಂಟಲು ಒಣಗುತ್ತಿದೆ, ಮೈಯೆಲ್ಲಾ ಬೆವರುತ್ತಿದೆ. ಈ ವರ್ಷ ಮಳೆ ಹೆಚ್ಚಾಗಿದ್ದರು, ಬೇಸಿಗೆ ನಿರೀಕ್ಷಿತ ಸಮಯಕ್ಕೂ ಮೊದಲೇ ಬಂದಿದೆ. ಈಗಿನ್ನು ಮಾರ್ಚ್, ಏಪ್ರಿಲ್ ತಿಂಗಳಿಗೆ ಹೇಗಪ್ಪ ಸಹಿಸಿಕೊಳ್ಳುವುದು ಎನ್ನುವಂತಾಗಿದೆ. ಅದರಲ್ಲೂ ಪ್ರತಿದಿನ ಏರಿಕೆಯಾಗುತ್ತಿರುವ ಉಷ್ಣಾಂಶದ ನಡುವೆ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇಲ್ಲಂದ್ರೆ ದೇಹ ಡಿಹೈಡ್ರೇಷನ್ ಆಗಿ, ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಉಷ್ಣಾಂಶ ಇನ್ನು ಹೆಚ್ಚಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

ಹಾಗಾದ್ರೆ ಉಷ್ಣಾಂಶ ಎಲ್ಲೆಲ್ಲಿ..? ಎಷ್ಟಿದೆ ಎಂಬುದನ್ನು ನೋಡುವುದಾದರೆ,

ಚಿತ್ರದುರ್ಗ : 37.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಮಂಗಳೂರು ಏರ್ಪೋರ್ಟ್ – 33.4° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಬೆಳಗಾವಿ ಏರ್ಪೋರ್ಟ್ – 37.7° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಬೆಂಗಳೂರು ನಗರ – 35° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಬೆಂಗಳೂರು ಹೆಚ್ಎಎಲ್ ಏರ್ಪೋರ್ಟ್ – 34.9° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ರಾಯಚೂರು – 40.6° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಬಾಗಲಕೋಟೆ – 39.9° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಬೀದರ್ – 38.8° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ವಿಜಯಪುರ – 38.6° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ. ಹೀಗಾಗಿ ಜನರು ಈ ಬಿಸಿಲಿನ ತಾಪದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...