ಚಿತ್ರದುರ್ಗ. ಮಾ.10: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ರೂ.170/-ರಂತೆ ಡಿಬಿಟಿ ಮುಖಾಂತರ ಹಣ ಪಾವತಿಸಲಾಗುತ್ತಿರುತ್ತದೆ. ಫೆಬ್ರವರಿ-2025ರ ಮಾಹೆಯಿಂದ ಪ್ರತಿ ಸದಸ್ಯರಿಗೆ ರೂ.170/-ರ ಡಿಬಿಟಿ ಹಣ ಬದಲಾಗಿ 05 ಕೆ.ಜಿ.ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿರುತ್ತದೆ.
ಮಾರ್ಚ್-2025ರ ಮಾಹೆಯ ಆಹಾರಧಾನ್ಯ ಬಿಡುಗಡೆಯಾಗಿದ್ದು ಹಾಗೂ ಫೆಬ್ರವರಿ-2025ರ ಮಾಹೆಯ ಆಹಾರಧಾನ್ಯ ಸೇರಿ ಮಾರ್ಚ್-2025ರ ಮಾಹೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 15 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಎಎವೈ ಪಡಿತರ ಚೀಟಿದಾರರಿಗೆ 01 ರಿಂದ 03 ಸದಸ್ಯರಿಗೆ 35 ಕೆ.ಜಿ.ಅಕ್ಕಿ, 04 ಸದಸ್ಯರಿಗೆ 45 ಕೆ.ಜಿ.ಅಕ್ಕಿ, 05 ಸದಸ್ಯರಿಗೆ 65 ಕೆ.ಜಿ.ಅಕ್ಕಿ, 06 ಸದಸ್ಯರಿಗೆ 85 ಕೆ.ಜಿ.ಅಕ್ಕಿ, 07 ಸದಸ್ಯರಿಗೆ 105 ಕೆ.ಜಿ.ಅಕ್ಕಿ, 08 ಸದಸ್ಯರಿಗೆ 125 ಕೆ.ಜಿ.ಅಕ್ಕಿ, 09 ಸದಸ್ಯರಿಗೆ 145 ಕೆ.ಜಿ.ಅಕ್ಕಿ ಹಾಗೂ 10 ಸದಸ್ಯರಿಗೆ 165 ಕೆ.ಜಿ ಅಕ್ಕಿ ಮುಂದುವರೆದು 10ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










