ಬೇಸಿಗೆ ಬಿಸಿ ಈ ಬಾರಿ ಬೇಗನೇ ಶುರುವಾಗಿದೆ. ಫೆಬ್ರವರಿಗೇನೆ ರಣರಣ ಬಿಸಿಲು ಚುರುಗುಡ್ತಾ ಇತ್ತು. ಈಗಂತೂ ಆರಂಭದಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ವರ್ಷ ಮಳೆ ಕೂಡ ಉತ್ತಮವಾಗಿಯೇ ಆಗಿದೆ. ಎಲ್ಲೆಡೆ ಸುರಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ತುಳುಕುವುದಲ್ಲದೆ ಜಲಾಶಯಗಳು ಕೋಡಿ ಬಿದ್ದಿವೆ. ಇದರಿಂದ ರೈತ ಕೊಂಚ ಸಮಾಧಾನಗೊಂಡಿದ್ದಾನೆ. ಈ ವರ್ಷದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗಲ್ಲ ಎಂಬ ಸಂತಸ ಇದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಸದ್ಯದ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ನೋಡೋಣಾ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಸಾಗರ ಮೂರನೇ ಬಾರಿಗೆ ಕೋಡಿ ಬಿದ್ದಿದೆ. ಸದ್ಯ ಗರಿಷ್ಠ ನೀರಿನ ಮಟ್ಟ 2140 ಅಡಿ : 30.42 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಹಾಗೇ ಇಂದಿನ ನೀರಿನ ಮಟ್ಟ 2138.35 ಅಡಿ ನೀರು ಇದೆ. ಅಂದ್ರೆ 29.04 ಟಿಎಂಸಿ ನೀರಿದೆ. ಒಳಹರಿವು ಇಲ್ಲ, ಹೊರ ಹರಿವು 715 ಕ್ಯೂಸೆಕ್ ಆಗಿದೆ.
ಹಾಗೇ ಮಲಪ್ರಭಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2059.74 ಅಡಿ, 16.39 ಟಿಎಂಸಿ ನೀರು ಇದೆ. ತುಂಗಾ ಭದ್ರಾ ಜಲಾಸಯದಲ್ಲಿ ಇಂದಿನ ನೀರಿನ ಮಟ್ಟ, 1606.52 ಅಡಿ / 31.22 ಟಿಎಂಸಿ ಇದೆ. ಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟವನ್ನು ನೋಡೋದಾದ್ರೆ, 2139.79 ಅಡಿ / 50.57 ಟಿಎಂಸಿ ಇದೆ. ರಾಜ್ಯದಲ್ಲಿ ಇನ್ನು ಹಲವು ಪ್ರಮುಖ ಜಲಾಶಯಗಳಲ್ಲೂ ನೀರು ತುಂಬಿದ್ದು, ಬೇಸಿಗೆಯಲ್ಲಿ ಉಪಯೋಗಕ್ಕೆ ಬರುವ ಸಂತಸ ರೈತರಲ್ಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










