Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SSLC ಮಕ್ಕಳೇ ನೆನಪಿರಲಿ ಈ ವರ್ಷ ಗ್ರೇಸ್ ಮಾರ್ಕ್ಸ್ ಇಲ್ಲ : ಪಾಸಾಗೋದಕ್ಕೆ 35 ಬೇಕೇ ಬೇಕು..!

---Advertisement---

ಬೆಂಗಳೂರು; ಎಸ್ಎಸ್ಎಲ್ಸಿ ಪರೀಕ್ಷೆ ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಈ ಪರೀಕ್ಷೆ ಪಾಸಾಗಿ ಬಿಟ್ಟರೆ ಮುಂದಿನ ಶಿಕ್ಷಣ ಸುಲಭ. ಕಷ್ಟಪಟ್ಟರೆ ಪಿಯುಸಿ ಪಾಸಾದಂತೆ. ಆದರೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊಂಚ ಹೆಚ್ಚಿನ ಎಫರ್ಟ್ ಹಾಕಲೇಬೇಕು. ಮಾರ್ಚ್ 21ರಿಂದ ಪರೀಕ್ಷೆ ಪ್ರಾರಂಭವಾಗುತ್ತದೆ. ಪ್ರತಿಸಲ ಗ್ರೇಸ್ ಮಾರ್ಕ್ಸ್ ನಿಂದ ಕೊಂಚ ಪಾಸಾಗುವ ಮಾರ್ಕ್ಸ್ ಗೆ ಸನಿಹವಿದ್ದವರನ್ನು ಪಾಸ್ ಮಾಡಿ ಬಿಡುತ್ತಿದ್ದರು. ಆದರೆ ಈ ಬಾರಿಯ ಮಕ್ಕಳಿಗೆ ಅದು ಬ್ಯಾಡ್ ಲಕ್ ಆಗಿದೆ. ಗ್ರೇಸ್ ಮಾರ್ಕ್ಸ್ ಅನ್ನು ಇಲಾಖೆ ನೀಡುತ್ತಿಲ್ಲ. ಹೀಗಾಗಿ ಜಸ್ಟ್ ಪಾಸ್ ಆಗಬೇಕೆಂದರೂ 35 ಮಾರ್ಕ್ಸ್ ತೆಗೆಯಲೇಬೇಕಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕೋವಿಡ್ ಪೂರ್ವ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲು ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಬಡ್ತಿ ಪಡೆಯಲು ಸಹಾಯ ಮಾಡುವುದಕ್ಕಾಗಿ ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 25ಕ್ಕೆ ಇಳಿಕೆ ಮಾಡಿತ್ತು. ಹಾಗೇ ಗ್ರೇಸ್ ಮಾರ್ಕ್ಸ್ ಗಳನ್ನು ಹೆಚ್ಚಾಗಿ ನೀಡಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಮಧು ಬಂಗಾರಪ್ಪ, ವೆಬ್ ಕಾಸ್ಟಿಂಗ್ ನಂತಹ ಹೊಸ ಕ್ರಮಗಳನ್ನು ಪರಿಚಯಿಸಿದ್ದರಿಂದ ಕಳೆದ ವರ್ಷ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಪಾಸಿಂಗ್ ಅಂಕವನ್ನು ಶೇಕಡಾ 25ಕ್ಕೆ ಇಳಿಕೆ ಮಾಡಬೇಕಾಗಿ ಬಂದಿತ್ತು. ಆ ವ್ಯವಸ್ಥೆ ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ. ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ‌. ಈ ವರ್ಷ ಯಾವುದೇ ಗ್ರೇಸ್ ಅಂಕಗಳು ಇರಯವುದಿಲ್ಲ ಹಾಗೂ ಪಾಸಿಂಗ್ ಅಂಕಗಳನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment