Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಂಪಿಯನ್ ಟ್ರೋಫಿ ಟೂರ್ನಿ : ಬ್ಯಾಟಿಂಗ್ ಓಕೆ ಬೌಲಿಂಗ್ ನದ್ದೇ ದೊಡ್ಡ ಸಮಸ್ಯೆ..!

---Advertisement---

 

ಭಾರತೀಯ ಕ್ರಿಜೆಟ್ ಪ್ರಿಯರು ಮತ್ತೊಂದು ಐಸಿಸಿ ಟ್ರೋಫಿ ಗೆಲುವನ್ನು ಎದುರು ನೋಡ್ತಿದ್ದಾರೆ. ಈಗಾಗಲೇ ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಟೀಂ ಇಂಡಿಯಾ ಅನೌನ್ಸ್ ಅಗಿದೆ. ಆದರೆ ಈಗ ಇರುವ ತಲೆ ನೋವು ಅಂದ್ರೆ ಬೌಲಿಂಗ್ ಸಮಸ್ಯೆಯದ್ದೇ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ. ಟೀಂ ಇಂಡಿಯಾಗೆ ಬೌಲಿಂಗ್ ನಲ್ಲಿ ಗೆಲ್ಲುವ ಸಾಮರ್ಥ್ಯ ಇದ್ಯಾ ಎಂಬ ಚರ್ಚೆಗಳು ನಡೆಯುತ್ತಿವೆ. ಅಳೆದು ತೂಗೋ ಆತುರದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮೊಹಮ್ಮದ್ ಸಿರಾಜ್ ಗೆ ಮೋಸ ಮಾಡೀತಾ ಎಂಬ ಚರ್ಚೆಗಳು ನಡೆಯುತ್ತಿವೆ.

ಸದ್ಯಕ್ಕೆ ಬಲಿಷ್ಠ ತಂಡವನ್ನ ಕಮಿಟಿ ಆಯ್ಕೆ ಮಾಡಿದೆ. ಆದ್ರೆ ಆನ್ ಫೀಲ್ಡ್ ನಲ್ಲಿ ಅಷ್ಟೇ ಸ್ಟ್ರಾಂಗ್ ಆಗಿ ಆಡಲಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಬ್ಯಾಟಿಂಗ್ ಒಕೆ ಆದ್ರೆ ಬೌಲಿಂಗ್ ನದ್ದೇ ಸಮಸ್ಯೆಯಾಗಿದೆ. ಯುವ ಎಡಗೈ ವೇಗಿ ಅರ್ಷ್ ದೀಪ್ ಸಿಂಗ್ ಜೊತೆಗೆ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ ಟೀಂ ಇಂಡಿಯಾದಲ್ಲಿರೋ ವೇಗಿಗಳಾಗಿದ್ದಾರೆ. 2023ರಲ್ಲಿ ಇಂಜೂತಿಗೆ ಒಳಗಾಗಿದ್ದ ಶಮಿ ಇಲ್ಲಿವರೆಗೂ ಒಂದೇ ಒಂದು ಇಂಟರ್ ನ್ಯಾಷನಲ್ ಪಂದ್ಯವನ್ನಾಡಿಲ್ಲ. ದೇಶಿ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ರು, ಆಗಲೂ ಇಂಜುರಿ ಸಮಸ್ಯೆಯಿಂದ ಹೊರಗೆ ಉಳಿದ ಶಮಿ, ಈಗ ಬೇಕಾ ಎಂಬ ಪ್ರಶ್ನೆ ಎದುರಾಗಿದೆ.

ಬೂಮ್ರಾ, ಶಮಿ ಇಬ್ಬರ ಫಿಟ್ನೆಸ್​ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಹೀಗಿದ್ರೂ ತಂಡದ ಪ್ರೀಮಿಯಂ ವೇಗಿ ಮೊಹ್ಮದ್​ ಸಿರಾಜ್​ನ ಕಡೆಗಣಿಸಿದ್ದು ಸರೀನಾ ಅನ್ನೋದು ಸದ್ಯ ಎದುರಾಗಿರೋ ಪ್ರಶ್ನೆಯಾಗಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕಷ್ಟಪಡಬೇಕಾಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...