Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಂತು ನೀರು ಕುಡಿಯಬೇಡಿ.. ಬಾಟೆಲ್ ಮೇಲೆತ್ತಿ ಕುಡಿಯಬೇಡಿ : ಕಚ್ಚಿನೆ ಕುಡಿಯಿರಿ .. ಯಾಕೆ ಗೊತ್ತಾ..?

---Advertisement---

ಕೆಲವೊಂದು ಸಲ ನಾವೂ ಮಾಡುವ ಸಣ್ಣ ಪುಟ್ಟ ತಪ್ಪುಗಳೇ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಆ ತಪ್ಪುಗಳನ್ನ ಕಡಿಮೆ ಮಾಡಿಕೊಂಡಷ್ಟು ನಮ್ಮ ಆರೋಗ್ಯ ಸುಧಾರಿಸುತ್ತದೆ. ಅದರಲ್ಲೂ ನೀರು ಕುಡಿಯುವ ವಿಧಾನವೂ ಬಹಳ ಮುಖ್ಯವಾಗುತ್ತದೆ. ಎಷ್ಟೋ ಸಲಯ ಸಮಯ ಆಗಿರುತ್ತೆ ನಿಂತುಕೊಂಡೆ ನೀರು ಕುಡಿದು ಓಡಿ ಹೋಗ್ತೀವಿ. ಇನ್ನು ಕೆಲವೊಂದು ಸಲ ಹೊರಗಿಂದ ಸುಸ್ತಾಗಿ ಬಂದಿರ್ತೀವಿ ಘಟಘಟ ಅಂತ ಬಾಟೆಲ್ ಅಥವಾ ಚೊಂಬನ್ನ ಮೇಲೆತ್ತಿ ನೀರನ್ನ ಕುಡಿದು ಬಿಡುತ್ತೀವಿ. ಇದು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ.

ಇದರಿಂದ ಕಾರ್ಡೊಯಾಕ್ ಅರೆಸ್ಟ್ ಆಗುವ ಸಾಧ್ಯತೆ ಚಜಾಸ್ತಿ ಇರುತ್ತದೆ. ಸುಸ್ತಾಗಿ ಬಂದವರು ಅವಸರದಲ್ಲಿ ನೀರು ಕುಡಿಯಬಾರದು. ಓಡಿ ಬಂದು ಘಟಘಟ ಎಂದು ನೀರನ್ನ ಮೇಲೆತ್ತಿ ಕುಡಿಯುವಾಗ ಆ ನೀರು ಲಂಗ್ಸ್, ಹಾರ್ಟ್ ಗೆ ಸಪ್ಲೈ ಆಗಬಹುದು. ಆ ಸಂದರ್ಭದಲ್ಲಿ ಹಾರ್ಟ್ ಅಟ್ಯಾಕ್ ಜಾಸ್ತಿಯಾಗುತ್ತೆ.

ನೀರನ್ನ ಸಿಪ್ ಬೈ ಸಿಪ್ ಕುಡಿಯುವುದರಿಂದ ಬಹಳಷ್ಟು ಅನುಕೂಲವಿದೆ. ಸಮಸ್ಯೆಯೂ ಆಗಲ್ಲ. ಕೂತು ನೀರು ಕುಡುಯುವುದರಿಂದ ಬಹಳಷ್ಟಿ ಅನುಕೂಲ ಇದೆ ಎಂಬುದು ಸಾಮಾನ್ಯವಾಗಿಯೇ ಎಲ್ಲರಿಗೂ ಗೊತ್ತು. ನಿಂತು ನೀರು ಕುಡಿದಾಗ ಕಿಡ್ನಿಗೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕುಳಿತುಕೊಂಡೇ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕುಳಿತು ನೀರು ಕುಡಿದಾಗ ದೇಹದ ಎಲ್ಲಾ ಕಡೆ ನೀರಿನ ಸಂಚಲನವಾಗುತ್ತದೆ. ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಕುಳಿತು ನೀರು ಕುಡಿಯುವುದೇ ಅನುಕೂಲ ಎಂದು ವೈದ್ಯರು ಸಹ ಹೇಳುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment