ಬೆಂಗಳೂರು: ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಆರ್ಸಿಬಿ ಎಡವಿದೆ ಎಂಬ ಬೇಸರ ಅಭಿಮಾನಿಗಳಿಗೆ ಕಾಡುವುದಕ್ಕೆ ಶುರುವಾಗಿದೆ. ಆ ಬೇಸರವನ್ನ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿಯೇ ಆಟಗಾರರನ್ನು ಬಿಟ್ಟುಕೊಟ್ಟಿದೆ. ಇನ್ನು ಈ ಸಲವೂ ಕಪ್ ಗೆದ್ದಂಗೆ ಎಂಬ ಬೇಸವರನ್ನು ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ತಂಡವನ್ನು ನಾವೇ ಕೊಂಡುಕೊಂಡರೆ ಹೇಗೆ ಎಂಬ ಪ್ಲ್ಯಾನ್ ಕೂಡ ಹಾಕಿಕೊಂಡಿದ್ದಾರೆ. ಅದಕ್ಕೆ ಈಗ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳೇ ಸೇರಿ ಅಭಿಮಾನಿಗಳೇ ತಂಡ ತೆಗೆದುಕೊಳ್ಳುವ ಐಡಿಯಾ ಇದು.
ಈ ಬಗ್ಗೆ ಈಗಾಗಲೇ ಆಲ್ ಇಂಡಿಯಾ ಆರ್ಸಿಬಿ ಟೀಂ ಫ್ಯಾನ್ಸ್ ಅಸೋಸಿಯೇಷನ್ ಪೋಸ್ಟರ್ ಹಂಚುತ್ತಿದ್ದಾರೆ. ಈಗ ಮಂಡ್ಯದ ಮಳವಳ್ಳಿ ಅಭಿಮಾನಿಗಳ ಪೋಸ್ಟರ್ ವೈರಲ್ ಆಗಿದೆ. ಟೀಮೂ ನಮ್ದೆ.. ಕಪ್ಪು ನಮ್ಮದೇ ಎಂಬ ಘೋಷ ವಾಕ್ಯದೊಂದಿಗೆ ಈ ಪೋಸ್ಟರ್ ನ ಬಿಟ್ಟಿದ್ದಾರೆ.
ಈ ಬಾರಿಯ ಖರೀದಿಯಲ್ಲಿ ಕೆ.ಎಲ್.ರಾಹುಲ್ ಸೇರಿದಂತೆ ಒಳ್ಳೊಳ್ಳೆ ಆಟಗಾರರನ್ನ ಕೈಬಿಡಲಾಗಿದೆ. ಹೀಗಾಗಿ ಅಭಿಮಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಕೆಲಸವಲ್ಲದೆ ಇದ್ದರು ಸಾಕಷ್ಟು ಗಮನ ಸೆಳೆಯುತ್ತಿದೆ. 10 ಲಕ್ಷ ಆರ್ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರ ರೂಪಾಯಿಯಂತೆ ಕಲೆಕ್ಟ್ ಮಾಡುವ ಪ್ಲ್ಯಾನ್ ಇದಾಗಿದೆ. ಈ ಮೂಲಕ ಸಾವಿರ ಕೋಟಿ ಹಣ ಸಂಗ್ರಹವಾಗುತ್ತದೆ. ಈ ಹಣದಲ್ಲಿ ತಮಗೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳೋಣಾ ಅಂತಾನೇ ಅಭಿಮಾನಿಗಳು ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗಿ ಬಿಟ್ಟರೆ, ಹಣ ಸಂಗ್ರಹವೂ ಆಗಿ ಬಿಟ್ಟರೆ ಅಭಿಮಾನಗಳ ಸಂಭ್ರಕ್ಕೆ ಪಾರವೇ ಇರುವುದಿಲ್ಲ ನೋಡಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















