ಬೆಂಗಳೂರು: ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಜಗಳನ್ನು ಮಾಡಿಕೊಂಡು ಹೊರಗೆ ಬಂದರು. ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂಬ ಮಾತಿದೆ. ಆದರೆ ಇದರ ನಡುವೆ ನಿನ್ನೆ ಮಧ್ಯರಾತ್ರಿ ಅಂದ್ರೆ ಶನಿವಾರ ಮಧ್ಯರಾತ್ರಿ ವಿಡಿಯೋ ಮೂಲಕ ಇಂದು ಸುದ್ದಿಗೋಷ್ಠಿ ನಡೆಸುತ್ತೀನಿ. ಎಲ್ಲರನ್ನು ಭೇಟಿ ಮಾಡ್ತೀನಿ ಎಂದು ಹೇಳಿದ್ದರು. ಆದರೆಮತ್ತೊಂದು ವಿಡಿಯೋ ಮಾಡಿ ಸುದ್ದಿಗೋಷ್ಠಿ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದೀಪ್ ಅವರ ತಾಯಿ ಸರೋಜಾ ಸಂಜೀವ ಅವರು ನಿಧನರಾಗಿದ್ದು, ಇಂದು ಸಂಜೆ ನಡೆಯಬೇಕಿದ್ದ ಸುದ್ದಿಗೋಷ್ಟಿಯನ್ನು ರದ್ದು ಮಾಡಿದ್ದಾರೆ. ವಿಡಿಯೋದಲ್ಲಿ ‘ನನಗೆ ಮಾತನಾಡಲು ಪದಗಳೇ ಬರುತ್ತಿಲ್ಲ. ಸುದೀಪ್ ಅವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ’ ಎಂದಿದ್ದಾರೆ. ಜೊತೆಗೆ ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
‘ಇಂದು ಸಂಜೆ ನಾನು ಪ್ರೆಸ್ ಮೀಟ್ ಕರೆದಿದ್ದೆ. ಆದರೆ ನಮ್ಮದಾದಾ ಅವರ ತಾಯಿ ನಿಧನರಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶನಿವಾರ ತಾನೇ ತಾಯಿಯ ಬಗ್ಗೆ ಮಾತನಾಡಿದ್ದರು. ಈಗ ನೋಡಿದರೆ ಈ ರೀತಿ ಆಗಿದೆ. ಕಿಚ್ಚ ದಾದಾನಿಗೆ ಈ ರೀತಿ ಆಗಬಾರದಿತ್ತು. ನನಗೆ ಮಾತನಾಡುವುದಕ್ಕೆ ಪದಗಳೇ ಸಿಗುತ್ತಿಲ್ಲ. ದಾದಾ ಅವರ ಕುಟುಂಬಕ್ಕೆ ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ. ತಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಎಂಥದ್ದು ಎಂಬುದು ನನಗೆ ಗೊತ್ತಿದೆ. ಮಾಧ್ಯಮ ಮಿತ್ರರು ನನ್ನನ್ನು ಕ್ಷಮಿಸಿ, ಈ ದಿನವನ್ನು ದಾದಾನಿಗಾಗಿ ಮೀಸಲಿಡುತ್ತಿದ್ದೇನೆ. ಇನ್ನೊಂದು ದಿನ ನಿಮ್ಮ ಜೊತೆಗೆ ನಾನು ಮಾತನಾಡಬಹುದು ಎಂದು ಜಗದೀಶ್ ಮತ್ತೊಂದು ವಿಡಿಯೋ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











