ಬಳ್ಳಾರಿ: ನಟ ದರ್ಶನ್ ಗೆ ಒಂದೇ ಒಂದು ಸಿಗರೇಟ್ ನಿಂದ ಕಂಟಕ ಎದುರಾಯ್ತು. ಅಂದು ವಿಲ್ಸನ್ ಗಾರ್ಡ್ ನಾಗನ ಜೊತೆಗೆ ಕೂತು ಸಿಗರೇಟ್ ಸೇದಿರಲಿಲ್ಲ ಎಂದಿದ್ದರೆ ಪರಪ್ಪನ ಅಗ್ರಹಾರದಲ್ಲಿಯೇ ಇರುತ್ತಿದ್ದರು. ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.
ಪರಪ್ಪನ ಅಗ್ರಹಾರದಿಂದ ಇಂದು ಬೆಳಗ್ಗೆ 9.45ಕ್ಕೆ ಬಳ್ಳಾರಿ ತಲುಪಿದ್ದಾರೆ. ಬಳ್ಳಾರಿ ಜೈಲಿನ ಒಳಗೆ ಹೋಗಿದ್ದು, ಈಗ ಕೈದಿ ನಂಬರ್ ಕೂಡ ಬದಲಾಗಿದೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ ಅವರಿಗೆ 6106 ಕೈದಿ ನಂಬರ್ ನೀಡಲಾಗಿತ್ತು. ಆದರೆ ಬಳ್ಳಾರಿಗೆ ಶಿಫ್ಟ್ ಮಾಡಿದ ಮೇಲೆ ಆ ನಂಬರ್ ಬದಲಾಗಿದೆ. 511 ನಂಬರ್ ಅನ್ನು ನೀಡಲಾಗಿದೆ. ಈ ಹಿಂದೆ 6106 ಕೈದಿ ನಂಬರ್ ಅನ್ನು ಅಭಿಮಾನಿಗಳು ಎಲ್ಲಾ ಕಡೆ ಹಾಕಿಸಿಕೊಂಡಿದ್ದರು. ಈಗ ಕೈದಿ ನಂಬರ್ ಬದಲಾಗಿದೆ.
ಇನ್ನು ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಾಗಲೂ ವಿವಾದ ಹುಟ್ಟು ಹಾಕಿಕೊಂಡಿದ್ದಾರೆ. ಹಾಕಿದ್ದ ಪೂಮಾ ಟೀ ಶರ್ಟ್, ಸನ್ ಗ್ಲಾಸ್, ಬ್ರಾಂಡೆಡ್ ಜೀನ್ಸ್ ಎಲ್ಲವೂ ಚರ್ಚೆಗೆ ಗ್ರಾಸವಾಗಿದೆ. ಆದರೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿರುವುದರಿಂದ ಅವರ ಕುಟುಂಬಸ್ಥರಿಗೇನೆ ತೊಂದರೆಯಾಗಲಿದೆ. ಪರಪ್ಪನ ಅಗ್ರಹಾರ ಬೆಂಗಳೂರಿನಲ್ಲಿಯೇ ಇದ್ದಿದ್ದರಿಂದ ಆಗಾಗ ದರ್ಶನ್ ಅವರನ್ನು ನೋಡಿಕೊಂಡು ಬರಲು ಹೋಗುತ್ತಿದ್ದರು. ದರ್ಶನ್ ಅವರ ಸ್ನೇಹಿತರು ಕೂಡ ವಾರಕ್ಕೆ ಎರಡ್ಮೂರು ಮಂದಿ ಆದ್ರೂ ಭೇಟಿ ನೀಡುತ್ತಿದ್ದರು. ಆದರೀಗ ಬಳ್ಳಾರಿ ದೂರವಾಗುವ ಕಾರಣ, ಭೇಟಿಗೆ ಹೋಗುವುದಕ್ಕೆ ಕಷ್ಟ. ಫ್ಯಾಮಿಲಿಯವರು ಕೂಡ ಭೇಟಿಯನ್ನು ಕಡಿಮೆ ಮಾಡಲಿದ್ದಾರೆ. ಇದು ದರ್ಶನ್ ಅವರ ಕುಟುಂಬಕ್ಕೆ ನಷ್ಟವಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









