Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ : ಟೀ ಶರ್ಟ್.. ಗ್ಲಾಸ್ ನಿಂದ ಮತ್ತೆ ವಿವಾದ..!

---Advertisement---

ಬಳ್ಳಾರಿ: ನಟ ದರ್ಶನ್ ಗೆ ಒಂದೇ ಒಂದು ಸಿಗರೇಟ್ ನಿಂದ ಕಂಟಕ ಎದುರಾಯ್ತು. ಅಂದು ವಿಲ್ಸನ್ ಗಾರ್ಡ್ ನಾಗನ ಜೊತೆಗೆ ಕೂತು ಸಿಗರೇಟ್ ಸೇದಿರಲಿಲ್ಲ ಎಂದಿದ್ದರೆ ಪರಪ್ಪನ ಅಗ್ರಹಾರದಲ್ಲಿಯೇ ಇರುತ್ತಿದ್ದರು. ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.

ಪರಪ್ಪನ ಅಗ್ರಹಾರದಿಂದ ಇಂದು ಬೆಳಗ್ಗೆ 9.45ಕ್ಕೆ ಬಳ್ಳಾರಿ ತಲುಪಿದ್ದಾರೆ. ಬಳ್ಳಾರಿ ಜೈಲಿನ ಒಳಗೆ ಹೋಗಿದ್ದು, ಈಗ ಕೈದಿ ನಂಬರ್ ಕೂಡ ಬದಲಾಗಿದೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ ಅವರಿಗೆ 6106 ಕೈದಿ ನಂಬರ್ ನೀಡಲಾಗಿತ್ತು. ಆದರೆ ಬಳ್ಳಾರಿಗೆ ಶಿಫ್ಟ್ ಮಾಡಿದ ಮೇಲೆ ಆ ನಂಬರ್ ಬದಲಾಗಿದೆ‌. 511 ನಂಬರ್ ಅನ್ನು ನೀಡಲಾಗಿದೆ. ಈ ಹಿಂದೆ 6106 ಕೈದಿ ನಂಬರ್ ಅನ್ನು ಅಭಿಮಾನಿಗಳು ಎಲ್ಲಾ ಕಡೆ ಹಾಕಿಸಿಕೊಂಡಿದ್ದರು. ಈಗ ಕೈದಿ ನಂಬರ್ ಬದಲಾಗಿದೆ.

ಇನ್ನು ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಾಗಲೂ ವಿವಾದ ಹುಟ್ಟು ಹಾಕಿಕೊಂಡಿದ್ದಾರೆ. ಹಾಕಿದ್ದ ಪೂಮಾ ಟೀ ಶರ್ಟ್, ಸನ್ ಗ್ಲಾಸ್, ಬ್ರಾಂಡೆಡ್ ಜೀನ್ಸ್ ಎಲ್ಲವೂ ಚರ್ಚೆಗೆ ಗ್ರಾಸವಾಗಿದೆ. ಆದರೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿರುವುದರಿಂದ ಅವರ ಕುಟುಂಬಸ್ಥರಿಗೇನೆ ತೊಂದರೆಯಾಗಲಿದೆ. ಪರಪ್ಪನ ಅಗ್ರಹಾರ ಬೆಂಗಳೂರಿನಲ್ಲಿಯೇ ಇದ್ದಿದ್ದರಿಂದ ಆಗಾಗ ದರ್ಶನ್ ಅವರನ್ನು ನೋಡಿಕೊಂಡು ಬರಲು ಹೋಗುತ್ತಿದ್ದರು. ದರ್ಶನ್ ಅವರ ಸ್ನೇಹಿತರು ಕೂಡ ವಾರಕ್ಕೆ ಎರಡ್ಮೂರು ಮಂದಿ ಆದ್ರೂ ಭೇಟಿ ನೀಡುತ್ತಿದ್ದರು. ಆದರೀಗ ಬಳ್ಳಾರಿ ದೂರವಾಗುವ ಕಾರಣ, ಭೇಟಿಗೆ ಹೋಗುವುದಕ್ಕೆ ಕಷ್ಟ. ಫ್ಯಾಮಿಲಿಯವರು ಕೂಡ ಭೇಟಿಯನ್ನು ಕಡಿಮೆ ಮಾಡಲಿದ್ದಾರೆ. ಇದು ದರ್ಶನ್ ಅವರ ಕುಟುಂಬಕ್ಕೆ ನಷ್ಟವಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment