ಸುದ್ದಿಒನ್, ಚಳ್ಳಕೆರೆ, ಜುಲೈ.29 : ತಾಲ್ಲೂಕಿನ ಕುದಾಪುರ ಬಳಿ ಇತ್ತೀಚೆಗೆ ಪೊಲೀಸ್ ಜೀಪ್ ಮೇಲೆ ಆಂಧ್ರದ ಅನಂತಪುರ ಮೂಲದ ಕಳ್ಳರು ಕಲ್ಲೆಸೆದು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ವೆಂಕಟರಮಣ ನನ್ನು ಬಂಧಿಸಿ ಆತನಿಂದ ಟಾಟಾ ಯೋಧ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇದೇ ಜುಲೈ 21ರಂದು ಕುದಾಪುರ ಬಳಿ ತಪಾಸಣೆಗೆಂದು ವಾಹನವನ್ನು ಪೊಲೀಸರು ತಡೆದರೂ ನಿಲ್ಲಿಸದೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದು ಕಳ್ಳರು ಎಸ್ಕೇಪ್ ಆಗಿದ್ದರು. ಆ ವೇಳೆ ನಾಯಕನಹಟ್ಟಿ ಪಿಎಸ್ ಐ ಶಿವಕುಮಾರ್ 2 ಗುಂಡು ಗಾಳಿಯಲ್ಲಿ ಮತ್ತು 3 ಗುಂಡು ವಾಹನದತ್ತ ಹಾರಿಸಿದ್ದರು. ಆದರೆ ಚಾಲಾಕಿ ಕಳ್ಳರು ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಾಯಕನಹಟ್ಟಿ ಠಾಣೆಯ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಆರೋಪಿ ವೆಂಕಟರಮಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಏಳು ಜನ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












