Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಂದನ್-ನಿವೇದಿತಾ ನಡುವೆ ಸೃಜನ್ ಹೆಸರು : ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಹೇಳಿದ್ದೇನು..?

---Advertisement---

ಬೆಂಗಳೂರು: ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಚಂದನ್ ಹಾಗೂ ನಿವೇದಿತಾ ಗೌಡ ದಿಢೀರನೇ ಡಿವೋರ್ಸ್ ಪಡೆದಿದ್ದಾರೆ. ಡಿವೋರ್ಸ್ ಬಳಿಕ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿವೆ. ನಿವೇದಿತಾ ಜೊತೆಗೆ ಸೃಜನ್ ಲೋಕೇಶ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಈ ವರ್ಷ ಸೃಜನ್ ಲೋಕೇಶ್ ವಿಶೆಷ ವಿಡಿಯೋ ಮಾಡಿ ಬರ್ತ್ ಡೇಗೆ ವಿಶ್ ಮಾಡಿದ್ದರು. ಆ ವಿಡಿಯೋ ವೈರಲ್ ಮಾಡುವ ಮೂಲಕ ಅವರ ಹೆಸರನ್ನು ತಂದಿದ್ದರು. ಆ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೃಜನ್ ಲೋಕೇಶ್ ಹೆಸರು ಹೇಳದೆ ಮಾತನಾಡಿದ ನಿವೇದಿತಾ, ಅವರು ನಮ್ಮ ಫ್ಯಾಮಿಲಿ ಫ್ರೆಂಡ್ಸ್. ಅವರ ಫ್ಯಾಮಿಲಿ ಜೊತೆಗೆ ಒಳ್ಳೆ ಬಾಂಡಿಂಗ್ ಇದೆ. ಪ್ರತಿ ವರ್ಷ ಅವರು ಕೂಡ ನನ್ನ ಬರ್ತ್ ಡೇಗೆ ವಿಶ್ ಮಾಡುತ್ತಾರೆ. ಆದರೆ ಈ ವರ್ಷವೇ ಯಾಕೆ ಈ ರೀತಿ ಆಗಿದ್ದು ಶಾಕ್ ಆಗಿದೆ. ಈ ವಿಚಾರ ವೈರಲ್ ಆಗುತ್ತಾ ಇದ್ದಂತೆ ಅವರಿಗೆ ಕಾಲ್ ಮಾಡಿ ಹೇಳಿದೆ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಇದಕ್ಕೆ ನಾವೂ ಕ್ಲಾರಿಟಿ ಕೊಡುತ್ತೀವಿ ಅಂತ. ಆಗ ಗಂಡ-ಹೆಂಡತಿ ಇಬ್ಬರು ಧೈರ್ಯ ಹೇಳಿದರು. ಅದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡಮ್ಮ ಅಂದ್ರು ಎಂದಿದ್ದಾರೆ.

ಇದೇ ವೇಳೆ ಪ್ರಶಾಂತ್ ಸಂಬರ್ಗಿ ಬಗ್ಗೆಯೂ ಮಾತನಾಡಿ, ಆ ವ್ಯಕ್ತಿ ನಮ್ಮ ಬಗ್ಗೆ ಏನೇನೋ ಹೇಳಿದ್ದಾರೆ. ನಾನು ತೆಲುಗು ನಿರ್ದೇಶಕರ ಹಿಂದೆ ಹೋಗುವುದಕ್ಕೆ ಡಿವೋರ್ಸ್ ಪಡೆದಿದ್ದೇನೆ ಎಂದಿದ್ದಾರೆ. ನಮ್ಮ ಇಬ್ಬರ ಮದುವೆಯಿಂದಾಗಿ ನನ್ನ ಕೆರಿಯರ್ ಗೆ ಯಾವುದೇ ಸಮಸ್ಯೆ ಆಗಿಲ್ಲ. ಮಕ್ಕಳು ಬೇಡ ಅಂತಾಗಲಿ, ಇನ್ಯಾರದ್ದೋ ಜೊತೆಗೆ ಸಂಬಂಧ ಇದೆ ಎಂಬುದಾಗಲಿ ಅಲ್ಲ. ನಾವಿಬ್ಬರು ಮ್ಯೂಚುವಲ್ ಅಂಡರ್ ಸ್ಟಾಡಿಂಗ್ ನಿಂದಾಗಿ ಡಿವೋರ್ಸ್ ಪಡೆದಿದ್ದೇವೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...