Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ ನಾಯಕನಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟಿದ್ದೆ : ಶಾಕಿಂಗ್ ವಿಡಿಯೋ ಬಿಟ್ಟ ಡ್ರೈವರ್ ಕಾರ್ತಿಕ್

---Advertisement---

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನೇ ದಿನೇ ಹಲವು ವಿಚಾರಗಳು ಹೊರಗೆ ಬರುತ್ತಿವೆ. ನಿನ್ನೆಯಷ್ಟೇ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಕಾರ್ತಿಕ್ ಬಳಿ ಪೆನ್ ಡ್ರೈವ್ ಇತ್ತು. ಕಾಂಗ್ರೆಸ್ ನವರಿಗೂ ಕೊಟ್ಟಿದ್ದೀನಿ. ರಾಜಕೀಯವಾಗಿ ಯಾವಾಗ ಬಳಸಬೇಕೋ ಆಗ ಬಳಸುತ್ತೀನಿ ಎಂದಿದ್ದ ಎಂದಿದ್ದರು. ಇದೀಗ ಕಾರ್ತೀಕದ ವಿಡಿಯೋ ಮಾಡಿದ್ದು, ಆ ಪೆನ್ ಡ್ರೈವ್ ದೇವರಾಜೇಗೌಡರಿಗೆ ಮಾತ್ರ ಕೊಟ್ಟಿದ್ದೆ. ದೇವರಾಜೇಗೌಡ ಅದನ್ನ ಏನಕ್ಕೆ ಬಳಸಿಕೊಂಡ್ರೋ ಗೊತ್ತಿಲ್ಲ ಎಂದಿದ್ದಾರೆ.

ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿದ ಕಾರ್ತಿಕ್, ನಾನು 15 ವರ್ಷದಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಕಳೆದ ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಹಿಂಸೆ ಕೊಟ್ಟು ಹಲ್ಲೆ ಮಾಡಿದ್ದರಿಂದ ಅವರ ಮನೆಯಿಂದ ಹೊರಬಂದೆ. ಹಾಸನ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಹೆಚ್ ಡಿ ರೇವಣ್ಣ ಅವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೋ ಪ್ರಸಾರ ಮಾಡಬಾರದು ಅಂತ ಪ್ರಜ್ವಲ್ ದೇವರಾಜ್ ನನ್ನ ವಿರುದ್ಧ ಸ್ಟೇ ತಂದಿದ್ದರು. ಆಗ ದೇವರಾಜೇಗೌಡ ಅವರು ನಿನ್ನ ಬಳಿ ಇರುವ ವಿಡಿಯೋ ಹಾಗೂ ಫೋಟೋಗಳನ್ನು ನನಗೆ ಕೊಡು ಯಾರಿಗೂ ತೋರಿಸಲ್ಲ ಎಂದು ಹೇಳಿದ್ದರು. ನಾನು ಅದನ್ನು ನಂಬಿ ನನ್ನ ಬಳಿಯಿದ್ದ ಒಂದು ಕಾಪಿಯನ್ನು ಕೊಟ್ಟೆ.

ಅವರ ಸ್ಚಾರ್ಥಕ್ಕೆ ಅಶ್ಲೀಲ ವಿಡಿಯೋವನ್ನು ತನ್ನ ಸ್ವಾರ್ಥಕ್ಕೆ ಬಳಕೆ‌ ಮಾಡಿಕೊಂಡಿರುವುದು ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಆ ಪೆನ್ ಡ್ರೈವ್ ಕೊಟ್ಟಿಲ್ಲ. ಪೆನ್ ಡ್ರೈವ್ ಹಂಚಿದವರು ಯಾರೂ ಅಂತಾನೂ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡರ ಬಳಿ ಯಾಕೆ ಹೋಗ್ತಾ ಇದ್ದೆ. ದೇವರಾಜೇಗೌಡರು ಅದನ್ನು ಯಾಕೆ ಬಳಸಿಕೊಂಡರು ಗೊತ್ತಿಲ್ಲ ಎಂದಿದ್ದಾರೆ.

ಸದ್ಯ ಎಸ್ಐಟಿ ತನಿಖೆಗೆ ಕಾರ್ತಿಕ್ ಹಾಜರಾಗಿದ್ದಾರೆ. ಈ ಮೂಲಕ ಸತ್ಯ ಹೊರಗೆ ಬರುವ ಸಾಧ್ಯತೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...