Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಪಾಟ್ ನಲ್ಲೇ ಡೈಲಾಗ್ ಡೆಲಿವರಿ : ಚಿತ್ರದುರ್ಗದ ಗಗನ ಬಾರಿ ಟ್ಯಾಲೆಂಟ್ ಗೆ ವೇದಿಕೆಯಲ್ಲೇ ಅಡ್ವಾನ್ಸ್ ನೀಡಿದ ತರುಣ್ ಸುಧೀರ್

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.08 : ಜೀ ಕನ್ನಡದಲ್ಲಿ ಕಳೆದ ವಾರದಿಂದ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಒಳ್ಳೆಯ ಪ್ರತಿಭೆಗಳನ್ನೇ ಆಯ್ಕೆ ಮಾಡಿ, ಈ ಶೋ ನಡೆಸಲಾಗುತ್ತಿದೆ. ನಾನಾ ಜಿಲ್ಲೆಯಿಂದ ಫೈನಲಿಸ್ಟ್ ಗಳು ತಮ್ಮ ನಟನಾ ಕೌಶಲ್ಯ ತೋರಿಸುತ್ತಿದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುದೀರ್, ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಳ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಗಗನ ಬಾರಿ ಎಂಬ ಕಲಾವಿದೆ ಬಂದಿದ್ದಾರೆ. ಅವರಿಗೆ ರಮೇಶ್ ಅರವಿಂದ್ ಅವರು ಅಂಬಾನಿ ಮದುವೆಯಲ್ಲಿದ್ದೀನಿ, ಅಲ್ಲಿನ ವಾತಾವರಣವನ್ನು ವಿವರಿಸಿ ಎಂದು ಹೇಳಿದ್ದಾರೆ. ಈಗ ಗಗನ ಬಾರಿ ಆ ಕ್ಷಣದಲ್ಲಿಯೇ ಎಲ್ಲವನ್ನು ಊಹೆ ಮಾಡಿಕೊಳ್ಳಬೇಕು. ಊಹೆ ಮಾಡಿಕೊಂಡು ಜಡ್ಜಸ್ ಗಳು ನೀಡಿದ ಸಮಯಕ್ಕೆ ಸರಿಯಾಗಿ ಆ ಸ್ಕಿಟ್ ಅನ್ನು ಮುಗಿಸಬೇಕು. ಅವರೇ ಸ್ಕ್ರಿಪ್ಟ್ ರೈಟರ್, ಅವರೇ ನಟನಾ ಮಾಸ್ಟರ್, ಅವರೇ ಡೈಲಾಗ್ ರೈಟರ್ ಕೂಡ ಆಗಿರುತ್ತಾರೆ. ಯೋಚನೆ ಮಾಡುವುದಕ್ಕೂ ಹೆಚ್ಚಿನ ಸಮಯವೇನು ಇರುವುದಿಲ್ಲ. ಅವರ ಪ್ರತಿಭೆ, ಟೈಮ್ ಸೆನ್ಸ್ ಕೂಡ ಇದರಲ್ಲಿ ಚೆಕ್ ಮಾಡಿದಂತೆ ಆಗುತ್ತದೆ. ಆದರೆ ಜಡ್ಜಸ್ ಗಳ ನಿರೀಕ್ಷೆ ಮೀರಿ ಅಭಿನಯಿಸುತ್ತಿದ್ದಾರೆ.

 

ರಮೇಶ್ ಅರವಿಂದ್ ಅವರು ಗಗನ ಬಾರಿಗೆ ಅಂಬಾನಿ ಮದುವೆಯಲ್ಲಿನ ವಾತಾವರಣವನ್ನು ವಿವರಿಸುವಂತೆ ಹೇಳಿದಾಗ, ‘ಅಂಬಾನಿ ಮಗನ ಮದುವೆಗೆ ಬಂದಿದ್ದೀನಿ ಕಣೇ. ಅಮಿರ್ ಖಾನ್, ಶಾರುಖ್ ಖಾನ್ ಬ್ಯಾಗ್ರೌಂಡ್ ಡ್ಯಾನ್ಸರ್ಸ್ ಹ, ಜಾಹ್ನವಿ ಕಪೂರ್ ನ ಹೋಗೋ ಬರೋರಿಗೆಲ್ಲಾ ಹೂ ಹಾಕೋಕೆ ನಿಲ್ಸವ್ರೆ’ ಅಂತ ತಮ್ಮದೇ ಸ್ಟೈಲ್ ನಲ್ಲಿ ಫುಲ್ ಜೋಶ್ ಆಗಿ ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಪ್ರೇಮಾ, ರಮೇಶ್ ಅರವಿಂದ್ ನಕ್ಕು ಎಂಜಾಯ್ ಮಾಡಿದ್ದಾರೆ.

ಸ್ಪಾಟ್ ನಲ್ಲೇ‌ ಡೈಲಾಗ್ ಬರೆದುಕೊಳ್ಳುವುದು ಅಂದ್ರೆ ಸುಮ್ನೆ ಅಲ್ಲ. ಇದು ತರುಣ್ ಸುಧೀರ್ ಅವರನ್ನು ಇಂಪ್ರೆಸ್ ಮಾಡಿದೆ. ಗಗನಾ ಬಾರಿ ಡೈಲಾಗ್ ಗೆ ಫಿದಾ ಆಗಿದ್ದಾರೆ. ವೇದಿಕೆ ಮೇಲೆ ಬಂದು ರೈಟರ್ ಆಗಿ ನೀನು ಸಿನಿಮಾ ಇಂಡಸ್ಟ್ರಿಗೆ ಬಾರಮ್ಮ. ಯಾವಾಗ ಬೇಕಾದರೂ ಬಾ ಅಂತ ಹೇಳಿ ಅಡ್ವಾನ್ಸ್ ಹಣವನ್ನು ನೀಡಿದ್ದಾರೆ. ಆ ಅಡ್ವಾನ್ಸ್ ತೆಗೆದುಕೊಂಡ ಗಗನ ಬಾರಿ, ಈ ಹಣ ನಂಗೆ ಐದು ಕೋಟಿಗೆ ಸಮ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಚಿತ್ರದುರ್ಗದ ನೆಟ್ಟಿಗರೊಬ್ಬರು ನಮ್ಮ ದುರ್ಗದ ಹುಡುಗಿ ಅಂದ್ರೆ ಸುಮ್ನೇನಾ ಅಂತ ಕಮೆಂಟ್ ಹಾಕುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment