Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರತಾಪ್ ಹೆಸರೇಳಲಿಲ್ಲ ಅಂತ ರೊಚ್ಚಿಗೆದ್ದ ವರ್ತೂರು ಸಂತೋಷ್

---Advertisement---

ಟಿಕೆಟ್ ಟು ಫಿನಾಲೆ ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಹೆಚ್ಚು ಅಂಕ ಪಡೆದವರು ಈ ವಾರ ಸೇವ್ ಆಗುತ್ತಾರೆ. ಹೀಗಾಗಿ ಒಬ್ಬೊಬ್ಬರು ಸ್ಪರ್ಧೆಗಳ ರೀತಿ ಆಡುತ್ತಿದ್ದಾರೆ. ದೋಸ್ತಿಗಳು ಅಂತಾನು ನೋಡುತ್ತಿಲ್ಲ, ಅಂಕಗಳು ಹತ್ತಿರತ್ತಿರ ಇದ್ದರೆ ಅವರನ್ನೇ ದೂರ ಇಡುತ್ತಿದ್ದಾರೆ. ಅದರಲ್ಲಿ ಪ್ರತಾಪ್ – ಸಂಗೀತಾರನ್ನು, ನಮ್ರತಾ – ವಿನಯ್ ರನ್ನು ದೂರವಿಟ್ಟಿದ್ದರು. ಅಷ್ಟೇ ಯಾಕೆ ವರ್ತೂರು ಸಂತೋಷ್ – ತುಕಾಲಿಯನ್ನೇ ಇಟ್ಟಿದ್ದರು. ಇದೀಗ ಪ್ರತಾಪ್ ಮಾತಿಗೆ ವರ್ತೂರು ಕೆಂಡಕಾರುತ್ತಿದ್ದಾರೆ. ಅದುವೆ ತನ್ನ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ.

 

ಶುಕ್ರವಾರ ಬಂತು ಎಂದರೆ ಮನೆ ಮಂದಿಗೆಲ್ಲಾ ಸ್ವಲ್ಪ ಭಯ ಜಾಸ್ತಿಯಾಗುತ್ತದೆ. ಒಂದು ಕಡೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸುವುದು. ಮತ್ತೊಂದು ಉತ್ತಮ ಸಿಗುವ ಸಂತಸ. ಈ ವಾರ ಕಳಪೆ ತೆಗೆದುಕೊಳ್ಳುವವರ ವಿಚಾರದಲ್ಲಿ ಕೊಂಚ ಭಯ ಕೂಡ ಜಾಸ್ತಿ ಇದೆ. ಮನೆಯಿಂದ ಹೊರಗೆ ಹೋಗುವ ಭಯ. ಈ ವಾರ ತುಕಾಲಿ ಸಂತು ಕಳಪೆ ತೊಟ್ಟು ಜೈಲಿಗೆ ಹೋಗಿದ್ದಾರೆ.

 

ಪ್ರತಾಪ್ ಕೂಡ ತುಕಾಲಿ ಸಂತೋಷ್ ಅವರಿಗೇನೆ ಕಳಪೆ ನೀಡಿದ್ದಾರೆ. ಅಂಕಗಳ ವಿಚಾರವನ್ನು ತೆಗೆದುಕೊಂಡು ತುಕಾಲಿ ಅವರನ್ನು ಕಳಪೆ ಎಂದೊದ್ದಾರೆ. ಕಡೆಗೂ ಎಲ್ಲರ ಅಭಿಪ್ರಾಯದಿಂದ ತುಕಾಲಿ ಜೈಲು ಸೇರಿದ್ದಾರೆ. ತುಕಾಲಿಗೆ ಜೈಲಿಗೆ ಹೋಗುವುದೇನು ಇಷ್ಟವಿರಲಿಲ್ಲ. ಆದರೂ ಫಿನಾಲೆಗೆ ಹತ್ತಿರತ್ತಿರ ಇರುವಾಗಲೇ ಜೈಲು ಸೇರಿದ್ದಾರೆ.

 

ಸಂತು ಪಂತು ಜೊತೆಗೆ ಇದ್ದರೆ ಮುಗೀತು. ಮನೆಯಲ್ಲಿ ಸದಾ ಜೊತೆಯಲ್ಲಿ ಇರುವುದು ಸಂತು ಮತ್ತು ಪಂತುನೆ. ಜೊತೆಗೆ ಕುಂತಾಗ ಬರೀ ಗಾಸಿಪ್ ಗಳನ್ನೇ ಮಾತನಾಡುತ್ತಾರೆ. ಅವರು ಹಾಗೇ ಇವರು ಹೀಗೆ ಅಂತ. ಯಾರ ಬಗ್ಗೆಯೂ ಪಾಸಿಟಿವ್ ಆಗಿ ಮಾತನಾಡುವುದಿಲ್ಲ‌. ಆದರೆ ಈಗ ಪ್ರತಾಪ್ ತನ್ನ ಹೆಸರು ಹೇಳಲಿಲ್ಲ ಅಂತ ರೊಚ್ಚಿಗೆದ್ದಿದ್ದಾರೆ. ನಿನ್ನ ಪರವಾಗಿ ನಿಂತರು ನನ್ನದೊಂದು ಹೆಸರು ಹೇಳಲಿಲ್ಲವಲ್ಲ ಅಂತ ರೊಚ್ಚಿಗೆದ್ದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment