ಮಂಗಳೂರು: ತುಳುನಾಡಿನ ದೈವಗಳ ವಿಚಾರವನ್ನಿಟ್ಟುಕೊಂಡು ಮಾಡಿದ್ದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲೂ ಸದ್ದು ಮಾಡಿತ್ತು. ರಿಷಭ್ ಶೆಟ್ಟಿ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಕಾಂತಾರ ಸಿನಿಮಾದಿಂದ ಹಲವು ಅವಾರ್ಡ್ ಗಳು ಕೂಡ ರಿಷಭ್ ಶೆಟ್ಟಿ ಅವರ ಹೆಗಲು ಸೇರಿದವು. ಇದೀಗ ಕಾಂತಾರ ಸಿನಿಮಾದ ಪ್ರಿಕ್ವೇಲ್ ಗೆ ದೈವಗಳ ಆಶೀರ್ವಾದ ಸಿಕ್ಕಿದೆ.
ಇಂದು ರಿಷಭ್ ಶೆಟ್ಟಿ, ಮಂಗಳೂರಿನ ವಜ್ರದೇಹಿ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಂತಾರಾ ಮೊದಲ ಅಧ್ಯಾಯಕ್ಕೆ ದೈವದಿಂದ ಅಭಯ ಸಿಕ್ಕಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮೂಲಕ ಸೂಚನೆ ನೀಡಿದೆ. ಏನೇ ಎದುರಾದರೂ ಕುಗ್ಗಬೇಡ ಎಂದು ತಿಳಿಸಿದೆ. ದೈವದ ಆಶೀರ್ವಾದ ಸಿಕ್ಕಿದ್ದಕ್ಕೆ ರಿಷಭ್ ಶೆಟ್ಟಿ ಅಂಡ್ ಟೀಂ ಫುಲ್ ಖುಷಿಯಾಗಿದ್ದಾರೆ. ಇನ್ನು ಕಾಂತಾರ ಸಿನಿಮಾ ಮಾಡುವುದಕ್ಕೂ ಮುನ್ನವೂ ದೈವದ ಅನುಮತಿ ಪಡೆದಿದ್ದರು.

ರಿಷಭ್ ಶೆಟ್ಟಿ ಅವರು ಈ ಹಿಂದೆ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ಅವರು ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನಿಸಿದ್ದರು. ಹೀಗಾಗಿ ರಿಷಬ್ ಇದರಲ್ಲಿ ಭಾಗಿ ಆಗಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿದೆ. ಕಾಂತಾರ ಮುಂದುವರೆದ ಭಾಗವನ್ನು ನೋಡಬೇಕೆಂಬ ಆಸೆಯನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದರು. ಹೀಗಾಗಿ ಅದರ ಹಿಂದಿನ ಭಾಗವನ್ನು ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಸಿನಿಮಾ ಪ್ರಿಕ್ವೇಲ್ ಶೂಟ್ ಆಗುತ್ತಿರುವುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















