Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗವಾಗಿಲ್ಲ : ಬಸವ ಪ್ರಭು ಸ್ವಾಮೀಜಿ ಸ್ಪಷ್ಟನೆ

---Advertisement---

ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗವಾಗಿಲ್ಲ : ಬಸವ ಪ್ರಭು ಸ್ವಾಮೀಜಿ ಸ್ಪಷ್ಟನೆ

No misappropriation of money in Basava Putthali project: Basava Prabhu Swamiji clarifies

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ.15 :
ಮಾಜಿ ಸಚಿವರಾದ ಏಕಾಂತಯ್ಯರವರು ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿ ಯಾವುದೇ ಹಣ ದುರುಪಯೋಗ ಆಗಿಲ್ಲ. ದ್ವೇಷದ ಮನೋಭಾವದಿಂದ ಈ ರೀತಿ ಮನವಿ ಸಲ್ಲಿಸಿದ್ದಾರೆ. ಇದು ಸುಳ್ಳು. ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀಗಳಾದ ಶ್ರೀ ಬಸವ ಪ್ರಭು ಶ್ರೀಗಳು ತಿಳಿಸಿದ್ದಾರೆ.

ಚಿತ್ರದುರ್ಗದ ಬೃಹನ್ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆ ಬರದ ಜಿಲ್ಲೆ ಬಸವ ಪುತ್ಥಳಿ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರೇಕ್ಷಣೀಯ ಸ್ಥಳ ಮಾಡುವ ಉದ್ದೇಶವಿದೆ. ಬಸವ ಪುತ್ಥಳಿ ನಿರ್ಮಾಣದ ಯೋಜನೆ ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಶ್ರೀಗಳ ಆಶಯದಂತೆ ಮಠದ ಹಿಂಭಾಗ 275 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಾಣವಾಗುತ್ತಿದೆ. 270 ಕೋಟಿ ರೂ ವೆಚ್ಚದಲ್ಲಿ ಬಸವ ಪುತ್ಥಳಿ ಯೋಜನೆಯ ಕಾಮಗಾರಿ ಪ್ರಾರಂಭವಾಗಿದೆ ಎಂದರು.

ಬಸವ ಪುತ್ಥಳಿ ನಿರ್ಮಾಣ ಯೋಜನೆಗೆ 05 ಜನರ ಕಮಿಟಿಯನ್ನು ರಚನೆ ಮಾಡಲಾಗಿದೆ.. ಪ್ರತಿಯೊಂದು ವೆಚ್ಚಕ್ಕೂ ರಸೀದಿಯಿದೆ.. ಯಾವುದೇ ಹಣ ದುರುಪಯೋಗ ಆಗಿಲ್ಲ.. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.. ಇದಕ್ಕೆ ಭಕ್ತರು ಕಿವಿಗೊಡಬಾರದು. ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನ ಮೇರೆಗೆ ತಂಡ ಮಠಕ್ಕೆ ಬಂದಾಗ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಇದು ಶ್ರೀಗಳ ಕನಸು.ಆಸೆ.. ಇದನ್ನು ಯಾವುದೇ ಕಾರಣಕ್ಕು ನಿಲ್ಲಿಸುವುದಿಲ್ಲ. ಕಾಮಗಾರಿ ಪ್ರಾರಂಭವಾಗಲಿದೆ.. ಶೀಘ್ರವಾಗಿ ಪೂರ್ಣಗೊಳಿಸಲಿದ್ದೇವೆ.. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ಇದುವರೆವಿಗೂ 35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು ಇದರಲ್ಲಿ 25 ಕೋಟಿ ರೂ.ಗಳನ್ನು ಇಗಾಗಲೇ ವೆಚ್ಚ ಮಾಡಲಾಗಿದೆ ಇದಕ್ಕೆ ಎಲ್ಲಾ ರೀತಿಯ ರಸೀದಿಗಳು ಇವೆ ಉಳಿದ 10 ಕೋಟಿ ಹಣ ಬ್ಯಾಂಕ್ ನಲ್ಲಿದೆ. ಸರ್ಕಾರ ಬಿಡುಗಡೆ ಮಾಡಿದ ಹಣಕ್ಕೆ ನಾವುಗಳು ಉಪಯೋಗದ ರಸೀದಿಯನ್ನು ನೀಡಿದಾಗ ಮಾತ್ರ ಬಾಕಿ ಹಣವನ್ನು ಬಿಡುಗಡೆ ಮಾಡುತ್ತದೆ ಅದೇ ರೀತಿ ನಾವು ಮಾಡಿದ್ದೇವೆ ಸರ್ಕಾರವೂ ಸಹಾ ಅದೇ ರೀತಿಯಲ್ಲಿ ಹಣವನ್ನು ಬಿಡುಗಡೆ ಮಾಡಿದೆ ಅಲ್ಲದೆ ಪ್ರತಿ 2-3 ತಿಂಗಳಿಗೊಮ್ಮೆ ಇಂಜಿನಿಯರ್‌ಗಳ ತಂಡವೂಂದು ಬಂದು ನಮ್ಮ ಕಾಮಗಾರಿಯನ್ನು ಪರಿಶೀಲಿಸುತ್ತಿದೆ ಎಂದರು.

ಗೋಷ್ಠಿಯಲ್ಲಿ 2023ರ ಶರಣ ಸಂಸ್ಕೃತಿ ಉತ್ಸವದ ಅದ್ಯಕ್ಷರಾದ ನಾಗರಾಜ್ ಸಮಾಜದ ಮುಖಂಡರಾಧ ಜಿತೇಂದ್ರ, ಪರಮೇಶ್ ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment