ನವದೆಹಲಿ: ಕಾಂಗ್ರೆಸ್ ನಲ್ಲಿ ಮುಂಚೆಯೆಲ್ಲಾ ಮದ್ಯಪಾನ, ಧೂಮಪಾನ ಮಾಡುವ ಹಾಗಿರಲಿಲ್ಲ. ಆದ್ರೆ ಈಗ ರಾಜಕಾರಣಿಗಳಲ್ಲಾಗಲೀ, ಇನ್ಯಾರಲ್ಲೋ ಆಗಲಿ ಈ ಎರಡು ಚಟಯಿಲ್ಲದವರು ಸಿಗುವರು ಅತಿ ವಿರಳ. ಹೀಗಾಗಿ ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಮದ್ಯಪಾನದ ವಿಚಾರದ ಚಾಲ್ತಿಗೆ ಬಂದಿದೆ.
ನವೆಂಬರ್ 1ರಿಂದ ಕಾಂಗ್ರೆಸ್ ನಲ್ಲಿ ಹೊಸ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯಂತೆ ಕಾಂಗ್ರೆಸ್ ಸದಸ್ಯತ್ವ ಬೇಕಿರುವವರು ಮದ್ಯಪಾನ ಮಾಡುವಾಗಿಲ್ಲ.. ಧೂಮಪಾನ ಅಭ್ಯಾಸ ಇರುವಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಈ ವಿಚಾರವನ್ನ ಕೇಳಿದ್ದಾರೆ.
ಸಭೆಯಲ್ಲಿ ನೆರೆದಿದ್ದವರನ್ನ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇಲ್ಲಿ ಯಾರೆಲ್ಲಾ ಮದ್ಯಪಾನ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕಿವಿಗೆ ಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಬ್ಬಿಬ್ಬಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಮದ್ಯಪಾನ ನಿಷೇಧ ಹಾಗೂ ಖಾದಿ ಬಟ್ಟೆಯನ್ನೇ ತೊಡುವ ನಿಯಮವನ್ನು ಯಾರೆಲ್ಲಾ ಪಾಲಿಸುತ್ತೀರಿ ಎಂದು ಕೇಳಿದ್ದಾರೆ ಎನ್ನಲಾಗಿದೆ.
ಎಲ್ಲರೂ ಮೌನವಾಗಿದ್ದಾಗ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ನಾಯಕರು ಕುಡಿಯುತ್ತಾರೆ ಎಂದಿದ್ದಾರೆ.
ಗಾಂಧೀಜಿಯವರ ತತ್ವಗಳನ್ನು ಪಾಲಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಅದರಂತೆ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಬಯಸುವವರು 10 ಹೊಸ ನಿಯಮಗಳನ್ನ ಒಪ್ಪಲೇಬೇಕಾಗಿದೆ. ಮದ್ಯಪಾನ ಹಾಗೂ ಮಾದಕ ವಸ್ತುಗಳಿಂದ ದೂರವಿರುತ್ತೇವೆ ಎಂದು ಘೋಷಣೆ ಮಾಡಬೇಕಿದೆ.