ಬಿಗ್ ಬಾಸ್ ಸೀಸನ್ 10 ಈಗ ಕಾಂಪಿಟೇಷನ್ ಮೂಲಕ ನಡೆಯುತ್ತಿದೆ. ಹೊಸ ಹೊಸ ಟಾಸ್ಕ್ ಗಳನ್ನು ನೀಡುವುದರ ಮೂಲಕ ಬಿಗ್ ಬಾಸ್ ಮಂದಿ ಸೀರಿಯಸ್ ಆಗಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಪೊಲೀಸರ ಅತಿಥಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಾಗ ವರ್ತೂರು ಸಂತೋಷ್ ಮೈತುಂಬಾ ಒಡವೆಗಳನ್ನು ಹಾಕಿಕೊಂಡು ಬಂದಿದ್ದರು. ಮನೆಯೊಳಗೂ ಅದೇ ಒಡವೆಗಳನ್ನೇ ಹಾಕಿಕೊಂಡು ಇರುತ್ತಿದ್ದರು. ಆದರೆ ಅದರಲ್ಲಿ ಹುಲಿ ಉಗುರು ಇರುವುದನ್ನೇ ಮರೆತಿದ್ದಾರೆ ಎನಿಸುತ್ತದೆ. ಈಗ ಅರಣ್ಯಾಧಿಕಾರಿಗಳ ಕಣ್ಣಿಗೆ ಅದೇ ಉಗುರು ಬಿದ್ದಿದ್ದು, ಅರೆಸ್ಟ್ ಮಾಡಿದ್ದಾರೆ.
ಆರೋಪ ಸಾಬೀತಾದ್ರೆ 3 ರಿಂದ 7 ವರ್ಷ ಜೈಲು ಶಿಕ್ಷೆ ನೀಡುವುದಕ್ಕೆ ಅವಕಾಶವಿದೆ. ವರ್ತೂರು ಪ್ರಕಾಶ್ ಧರಿಸಿರುವುದು ಅಸಲಿ ಹುಲಿ ಉಗುರು. ವನ್ಯಜೀವಿಗಳ ಅಂಗಾಂಗವನ್ನು ಯಾರು ಬಳಸಬಾರದು. ಮತ್ತೊಮ್ಮೆ ದೃಢಪಡಿಸಿಕೊಳ್ಳಲು ಉಗುರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಎಫ್, ರವೀಂದ್ರ ಕುಮಾರ್ ಹೇಳಿದ್ದಾರೆ.
ದೂರನ್ನು ಯಾರಾದರೂ ನೀಡಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಈ ಬಗ್ಗೆ ರವೀಂದ್ರ ಕುಮಾರ್ ಅವರು ಹೇಳುವ ಮೂಲಕ, ನಮ್ಮ ಮೇಲಾಧಿಕಾರಿಗಳು ಇದರ ಬಗ್ಗೆ ತನಿಖೆ ಮಾಡಲು ಹೇಳಿದರು. ಅದು ಹುಲಿ ಉಗುರಿನಂತೆ ಇದ್ದ ಕಾರಣ, ವರ್ಜಿನಲ್ ಇರಬಹುದಾ ಎಂಬುದನ್ನು ತನಿಖೆ ನಡೆಸಲು ತಿಳಿಸಿದ್ದರು. ಹೀಗಾಗಿ ತನಿಖೆ ಮಾಡಿದಾಗ ಅದರ ನಿಜಾಂಶ ಹೊರಗೆ ಬಂದಿದೆ ಎಂದಿದ್ದಾರೆ. ಹಳ್ಳಿಕಾರ್ ಸಂತೋಷ್ ಎಂದೇ ಖ್ಯಾತಿ ಪಡೆದಿದ್ದ ಸಂತೋಷ್, ತಳಿ ಹಸುಗಳನ್ನು ಸಾಕುವ ಮೂಲಕ ಖ್ಯಾತಿ ಪಡೆದಿದ್ದರು. ಬಿಗ್ ಬಾಸ್ ಮನೆಗೆ ಹೋಗಿದ್ದ ಸಂತೋಷ್ ಅಲ್ಲಿಯೂ ಚಿನ್ನಾಭರಣಗಳನ್ನು ಹಾಕಿಕೊಂಡೇ ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











