Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಟಿಕೆಟ್ : ಶಾಸಕ ಮುನಿರತ್ನ ಹೇಳಿದ ಸೀಕ್ರೆಟ್ ಏನು..?

---Advertisement---

ಬೆಂಗಳೂರು: ಸದ್ಯಕ್ಕೆ ಬೆಳಗಾವಿ ರಾಜಕಾರಣದಲ್ಲಿ ಈಗಾಗಲೇ ಟಿಕೆಟ್ ಫೈಟ್ ಶುರುವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದೇನೋ ಆಗಾಗ ಪ್ರೂವ್ ಆಗ್ತಾ ಇದೆ. ಇದೀಗ ಶಾಸಕ ಮುನಿರತ್ನ ಅವರು ಲೋಕಸಭಾ ಚುನಾವಣೆಯ ಸೀಕ್ರೆಟ್ ಒಂದನ್ನು ಹೇಳಿದ್ದಾರೆ.

‘ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಇಷ್ಟಯ ದಿನ ನಮ್ಮ ಬೆಳಗಾವಿ, ನಮ್ಮ ಭದ್ರಕೋಟೆ ಎಂದುಕೊಂಡಿದ್ದರು. ಅದೆಲ್ಲೋ ಒಂದು ಕಡೆ ಕೈತಪ್ಪಿ, ಅವರ ಕುಟುಂಬಕ್ಕೆ ಟಿಕೆಟ್ ಸಿಗುವುದು ಅನುಮಾನವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನ ನಾನು ಹೇಳ್ತಿಲ್ಲ. ಜನರೇ ಹೇಳಿತ್ತಿದ್ದಾರೆ. ಅವರೆಲ್ಲ 135 ಜನ ಒಂದೇ ಪಕ್ಷದಲ್ಲಿದ್ದಾರೆ’.

ಅಷ್ಟು ಜನ ಒಟ್ಟಿಗೆ ಹೋಗುತ್ತಿದ್ದಾರೆ ಎಂದರೆ ಎಷ್ಟು ಒಗ್ಗಟ್ಟಿದೆ ಎಂಬುದು ಗೊತ್ತಾಗುತ್ತೆ. ಆದರೆ ಸತೀಶ್ ಜಾರಕಿಹೊಳಿ ವೀಕ್ ಆಗುತ್ತಿದ್ದಾರೆ. ಬೆಳಗಾವಿಯಲ್ಲಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗ್ತಾ ಇದೆ. ಮುಂದೊಂದು ದಿನ ಮೂಲೆ ಗುಂಪಾಗಲಿದ್ದಾರೆ. ಸತೀಶ್ ಜಾರಕಿಹೊಳಿಯ ಭದ್ರಕೋಟೆಯ ಒಂದೊಂದೆ ಕಲ್ಲು ಬೀಳುತ್ತಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment