Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಮತ್ತು ಧ್ರುವ ನಡುವೆ ಮನಸ್ತಾಪ ಇರುವುದು ನಿಜನಾ..? ಆಕ್ಷನ್ ಪ್ರಿನ್ಸ್ ಕೊಟ್ಟ ಸುಳಿವು ಏನು..?

---Advertisement---

 

ಬೆಂಗಳೂರು: ಇತ್ತಿಚೆಗೆ ಕಾವೇರಿ ಹೋರಾಟದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು. ಅಂದು ವೇದಿಕೆ ಮೇಲೆ ಕೂತಿದ್ದ ಧ್ರುವ, ದರ್ಶನ್ ಬಂದಾಗಲೂ ಮಾತನಾಡದೆ, ನೋಡದೆ ಎದ್ದು ಹೋಗಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲೆಲ್ಲಾ ಟ್ರೋಲ್ ಆಗಿತ್ತು. ದರ್ಶನ್ ಅಭಿಮಾನಿಗಳು ಧ್ರುವ ಮೇಲೆ, ಧ್ರುವ ಅಭಿಮಾನಿಗಳು ದರ್ಶನ್ ಮೇಲೆ ಮುಗಿಬಿದ್ದಿದ್ದರು. ಬಳಿಕ ಒಳ್ಳೆ ಹುಡುಗ ಪ್ರಥಮ್, ಧ್ರುವ ಅವರು ನೋವಲ್ಲಿದ್ದಾರೆ ಎಂಬ ವಿಚಾರವನ್ನ ತಿಳಿಸಿ, ಅದಕ್ಕೊಂದು ತೆರೆ ಎಳೆದಿದ್ದರು. ಆದರೆ ಈಗ ಧ್ರುವ ಅವರು ಹೇಳಿದ ಮಾತು ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.

ದರ್ಶನ್ ಗೆ ಒಂದಷ್ಟು ಪ್ರಶ್ನೆ ಕೇಳುವುದು ಇದೆ ಎಂದು ಹೇಳುವ ಮೂಲಕ ಇಬ್ಬರ ನಡುವೆ ಮನಸ್ತಾಪ ಇದೆ ಎಂಬುದನ್ನು ಪರೋಕ್ಷವಾಗಿ ಪ್ರೂವ್ ಮಾಡಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಧ್ರುವ ಸರ್ಜಾ, ದರ್ಶನ್ ಬಗ್ಗೆ ಒಂದಷ್ಟು ಮಾತುಗಳನ್ನಾಡಿದ್ದಾರೆ. ‘ಅವರು ಹಿರಿಯ ನಟ. ನಮ್ಮ ಸೀನಿಯರ್ ಕೂಡ ಹೌದು. ದರ್ಶನ್ ಅವರ ಉಪಸ್ಥಿತಿ ಹಾಗೂ ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತದೆ. ಆದರೆ ಅವರ ಬಳಿ ಕೇಳುವುದಕ್ಕೆ ಒಂದಷ್ಟು ಪ್ರಶ್ನೆಗಳಿವೆ. ಅದನ್ನು ಅವರ ಬಳಿಯೇ‌ ಕೇಳುತ್ತೇನೆ’ ಎಂದು ಹೊಸ ಟ್ವಿಸ್ಟ್ ನೀಡಿದ್ದಾರೆ.

ಇನ್ನು ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ, ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನಲ್ಲಿರುವ ಗೊಂದಲದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ನನಗೂ ಸ್ವಾಭಿಮಾನವಿದೆ. ನಾನು ಅವರೊಟ್ಟಿಗೆ ಈ ಬಗ್ಗೆ ಮಾತನಾಡುತ್ತೇನೆ. ನನಗೆ ನಾಟಕೀಯವಾಗಿ ಇರುವುದಕ್ಕೆ ಬರಲ್ಲ. ಮನಸ್ಸಲ್ಲೊಂದು ಹೊರಗೊಂದು ಇರುವುದಕ್ಕೆ ಆಗಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment