ಉದ್ಯಮಿ ಗೋವಿಂದ ಬಾಬು ಟಿಕೆಟ್ ಕೊಡಿಸುತ್ತೀನಿ ಅಂತ ಐದು ಕೋಟಿ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಪೊಲೀಸರ ಬಂಧನದಲ್ಲಿದ್ದಾಳೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಚೈತ್ರಾ ಕುಂದಾಪುರ ತಪ್ಪೊಪ್ಪಿಕೊಂಡಿದ್ದಾಳೆ. ಐದು ಕೋಟಿ ಪಡೆದಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ. ಚೈತ್ರಾ ಕುಂದಾಪುರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ನಾಟಕವಾಡಿ ಆಸ್ಪತ್ರೆಗೆ ಸೇರಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಯಿಂದ ವಾಪಾಸ್ ಬಂದ ಮೇಲೆ ಮತ್ತೆ ವಿಚಾರಣೆ ನಡೆಸಿದ್ದಾರೆ. ಹಲವು ಸಾಕ್ಷಿಗಳನ್ನು ಮುಂದಿಟ್ಟ ಬಳಿಕ ಚೈತ್ರಾ ಒಪ್ಪಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಲೈಫ್ ನಲ್ಲಿ ಸೆಟಲ್ ಆಗುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಟಿಕೆಟ್ ಕೊಡಿಸುವ ವಿಚಾರದಲ್ಲಿ ಸಾಕಷ್ಟು ನಾಟಕದ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಗೋವಿಂದ ಬಾಬು ಹೆಂಡತಿಗೆ ಟಿಕೆಟ್ ಸಿಕ್ಕಿದ್ದರು ಕೂಡ ಚೈತ್ರಾ ಅಂಡ್ ಗ್ಯಾಂಗ್ ಸೇಫ್ ಆಗುತ್ತಿತ್ತು. ಆದರೆ ಟಿಕೆಟ್ ಸಿಗದ ಹಿನ್ನೆಲೆ ಲಾಕ್ ಆಗಿದ್ದಾರೆ. ಇನ್ನು ಈ ಐದು ಕೋಟಿ ಹಣದಲ್ಲಿ ಚೈತ್ರಾಗೆ ಸೇರಿದ್ದು ಮೂರು ಕೋಟಿ. 60 ಲಕ್ಷ ಹಾಲಶ್ರೀ ಸ್ವಾಮೀಜಿಗೆ ಹೋಗಿದೆ. ಇನ್ನುಳಿದ ಹಣದಲ್ಲಿ ಗ್ಯಾಂಗ್ ಹಂಚಿಕೊಂಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










